More

    ಏಕದಿನ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲೂ ಕಂಬ್ಯಾಕ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್: ಶತಕ ಬಾರಿಸಿ ವಿರಾಟ್ ಕೊಹ್ಲಿ ಸರಿಗಟ್ಟಿದ ವಿಕೆಟ್ ಕೀಪರ್

    ಸೆಂಚುರಿಯನ್: ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಭರ್ಜರಿ ಾರ್ಮ್ ಮುಂದುವರಿಸಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕಣಕ್ಕಿಳಿದ ಕೆಎಲ್ ರಾಹುಲ್ (101 ರನ್, 137 ಎಸೆತ, 14 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಮೂಲಕ ಸಿಡಿಸಿದ ಅಮೋಘ ಶತಕದ ನೆರವಿನಿಂದ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಗೌರವಯುತ ಮೊತ್ತ ದಾಖಲಿಸಿತು. ಆದರೆ, ವೃತ್ತಿಜೀವನದ ಅಂತಿಮ ಟೆಸ್ಟ್ ಸರಣಿಯಲ್ಲಿ ಹಂಗಾಮಿ ನಾಯಕ ಡೀನ್ ಎಲ್ಗರ್ (140* ರನ್, 211 ಎಸೆತ, 23 ಬೌಂಡರಿ) ಶತಕದ ತಿರುಗೇಟು ನೀಡುವುದರೊಂದಿಗೆ ಹರಿಣಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ ಮುನ್ನಡೆ ಒದಗಿಸಿದ್ದಾರೆ.

    ಪಂದ್ಯದ ಎರಡನೇ ದಿನವಾದ ಬುಧವಾರ 8 ವಿಕೆಟ್‌ಗೆ 208 ರನ್‌ಗಳಿಂದ ಆಟ ಆರಂಭಿಸಿದ ಭಾರತ, 67.4 ಓವರ್‌ಗಳಲ್ಲಿ 245 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ದಿನದಂತ್ಯಕ್ಕೆ 66 ಓವರ್‌ಗಳಲ್ಲಿ 5 ವಿಕೆಟ್‌ಗೆ 256 ರನ್‌ಗಳಿಸಿದ್ದು, 11 ರನ್ ಮುನ್ನಡೆ ಸಾಧಿಸಿದೆ. ಬೆಳಗಿನ ಆಟ ಬೇಗನೆ ಆರಂಭಿಸಲು ಮಳೆ ಅಡ್ಡಿ ಪಡಿಸಿದರೆ, ದಿನದಂತ್ಯಕ್ಕೆ ಮಂದಬೆಳಕು ಅಡಚಣೆ ತಂದಿತು.

    8: ಕೆಎಲ್ ರಾಹುಲ್ ಸೆಂಚುರಿಯನ್‌ನಲ್ಲಿ ಸತತ 2ನೇ ಶತಕ, ಒಟ್ಟಾರೆ 8ನೇ ಹಾಗೂ ವಿದೇಶದಲ್ಲಿ 7ನೇ ಟೆಸ್ಟ್ ಶತಕ ಸಿಡಿಸಿದರು.

    2: ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ 2ನೇ ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್. 2022ರಲ್ಲಿ ರಿಷಭ್ ಪಂತ್ ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು.

    6: ಕೆಎಲ್ ರಾಹುಲ್ ವಿದೇಶಿ ನೆಲದಲ್ಲಿ ಶತಕ ಸಿಡಿಸಿದ 6ನೇ ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಎನಿಸಿದರು. ರಿಷಭ್ ಪಂತ್, ಧೋನಿ, ವಿಜಯ್ ಮಂಜ್ರೆಕರ್, ಅಜಯ್ ರಾತ್ರ, ವೃದ್ಧಿಮಾನ್ ಸಾಹ ಹಿಂದಿನ ಸಾಧಕರು.

    2: ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಟೆಸ್ಟ್ ಶತಕ ಗಳಿಸಿದ ವಿರಾಟ್ ಕೊಹ್ಲಿ (2) ದಾಖಲೆಯನ್ನು ರಾಹುಲ್ ಸರಿಗಟ್ಟಿದರು. ಸಚಿನ್ ತೆಂಡುಲ್ಕರ್ (5) ಅಗ್ರಸ್ಥಾನದಲ್ಲಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts