More

    IPL 2024: ಡೆಲ್ಲಿ ವಿರುದ್ಧ ಲಖನೌ ತಂಡದ ಸೋಲಿಗೆ ಕಾರಣ ನೀಡಿದ ನಾಯಕ ಕೆಎಲ್​ ರಾಹುಲ್​

    ಲಖನೌ: ಕುಲದೀಪ್​ ಯಾದವ್​ ನಮ್ಮ ಬ್ಯಾಟಿಂಗ್​ ವಿಭಾಗಕ್ಕೆ ಕಡಿವಾಣ ಹಾಕಿದರು. ಇದರಿಂದಾಗಿ 15-20 ರನ್​ ಕೊರತೆ ಅನುಭವಿಸಿದೆವು. ಆದರೆ ಕೊನೆಯವರೆಗೆ ಹೋರಾಡಿದ ಖುಷಿ ಇದೆ ಎಂದು ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆಎಲ್​ ರಾಹುಲ್​ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ 6 ವಿಕೆಟ್​ ಸೋಲಿನ ಬಳಿಕ ಹೇಳಿದ್ದಾರೆ.

    ಲಖನೌ ತಂಡ 7 ವಿಕೆಟ್​ಗೆ 167 ರನ್​ ಪೇರಿಸಿದರೆ, ಡೆಲ್ಲಿ ತಂಡ 18.1 ಓವರ್​ಗಳಲ್ಲಿ 4 ವಿಕೆಟ್​ಗೆ 170 ರನ್​ ಪೇರಿಸಿ ಜಯಿಸಿತು. ಡೇವಿಡ್​ ವಾರ್ನರ್​ (8) ವೈಫಲ್ಯದ ನಡುವೆ ಪೃಥ್ವಿ ಷಾ (32) ಪವರ್​ಪ್ಲೇನಲ್ಲಿ ಬಿರುಸಿನ ಆಟವಾಡಿದರು. ಬಳಿಕ ಜೇಕ್​ ಫ್ರೇಸರ್​ ಮೆಕ್​ಗುರ್ಕ್​ (55) ಮತ್ತು ನಾಯಕ ರಿಷಭ್​ ಪಂತ್​ (41) 3ನೇ ವಿಕೆಟ್​ಗೆ 77 ರನ್​ ಸೇರಿಸಿ ಡೆಲ್ಲಿ ಜಯದ ಹಾದಿ ಸುಗಮಗೊಳಿಸಿದರು. ಕೊನೆಯಲ್ಲಿ ಟ್ರಿಸ್ಟಾನ್​ ಸ್ಟಬ್ಸ್​ (15*) ಮತ್ತು ಶೈ ಹೋಪ್​ (11*) ಗೆಲುವಿನ ದಡ ಸೇರಿಸಿದರು. ಸ್ಪಿನ್ನರ್​ ರವಿ ಬಿಷ್ಣೋಯಿ (25ಕ್ಕೆ 2) ಪ್ರತಿಹೋರಾಟ ವ್ಯರ್ಥವಾಯಿತು.

    “ಮೆಕ್​ಗುರ್ಕ್​ ನಮಗೆ ಅಪರಿಚಿತ ಆಟಗಾರರಾಗಿದ್ದರು. ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಚೆಂಡನ್ನು ಅತ್ಯುತ್ತಮವಾಗಿ ಬಾರಿಸಿ ಶ್ರೇಯ ಅವರಿಗೆ ಸಲ್ಲಬೇಕು. 10ನೇ ಓವರ್​ವರೆಗೆ ಪಂದ್ಯ ನಮ್ಮ ಕೈಯಲ್ಲೇ ಇತ್ತು. ಆದರೆ ನಂತರ ಕ್ಯಾಚ್​ ಡ್ರಾಪ್​ ಆಗಿದ್ದರಿಂದ ಮೆಕ್​ಗುರ್ಕ್​&ರಿಷಭ್​ ಜೋಡಿ ಪಂದ್ಯವನ್ನು ಕಸಿದುಕೊಂಡಿತು’ ಎಂದು ಕೆಎಲ್​ ರಾಹುಲ್​ ವಿವರಿಸಿದ್ದಾರೆ.

    ಗೆಲುವು ಸಮಾಧಾನ ತಂದಿದೆ. ಚಾಂಪಿಯನ್ನರಂತೆ ಆಡಿ, ಕಠಿಣ ಹೋರಾಟ ನಡೆಸಿ ಎಂದು ಆಟಗಾರರಿಗೆ ಹೇಳಿದ್ದೆ. ತಂಡದ ಕೆಲ ಆಟಗಾರರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ತಂಡದ ಹೆಚ್ಚಿನ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿರುವುದು ಹಿನ್ನಡೆಯಾಗಿದೆ. 10 ತಂಡಗಳು ಇರುವುದರಿಂದ ಸೂಕ್ತ ಬದಲಿ ಆಟಗಾರರ ಲಭ್ಯತೆಯೂ ಕಷ್ಟವಾಗಿದೆ ಎಂದು ಡೆಲ್ಲಿ ನಾಯಕ ರಿಷಭ್​ ಪಂತ್​ ತಿಳಿಸಿದರು.

    *1: ಲಖನೌ ಎದುರು 160 ಪ್ಲಸ್​ ಮೊತ್ತ ಬೆನ್ನಟ್ಟಿ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಡೆಲ್ಲಿ ಪಾತ್ರವಾಗಿದೆ. ಎಲ್​ಎಸ್​ಜಿ ಈ ಮುನ್ನ 13 ಪಂದ್ಯಗಳಲ್ಲಿ 160 ಪ್ಲಸ್​ ಮೊತ್ತ ರಸಿಕೊಂಡಿತ್ತು.

    *7: ಜೇಕ್​ ಫ್ರೇಸರ್​ ಮೆಕ್​ಗುರ್ಕ್​ ಐಪಿಎಲ್​ನಲ್ಲಿ ಪದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ 7ನೇ ಬ್ಯಾಟರ್​ ಎನಿಸಿದರು. ಗಂಭೀರ್​, ಧವನ್​, ವಾರ್ನರ್​, ಜಾಧವ್​, ಕಾಲಿಂಗ್​ವುಡ್​, ಬಿಲ್ಲಿಂಗ್ಸ್​ ಹಿಂದಿನ ಸಾಧಕರು.

    ಪತ್ನಿ ಜತೆ ಯುಗಾದಿ ಹಬ್ಬ ಆಚರಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಜಹೀರ್​ ಖಾನ್​ಗೆ ನಿಂದನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts