More

    VIDEO: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ರಾಹುಲ್ ಶತಕದ ಸಂಭ್ರಮ ಹೇಗಿತ್ತು ಗೊತ್ತ?

    ಲಂಡನ್: ಕರ್ನಾಟಕದ ಕೆಎಲ್ ರಾಹುಲ್ ಇಂಗ್ಲೆಂಡ್ ಎದುರು 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಎಲ್ಲರ ಗಮನಸೆಳೆದಿದ್ದಾರೆ. ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ ಕರ್ನಾಟಕದ 3ನೇ ಹಾಗೂ ಭಾರತದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಮೊದಲ ದಿನವಿಡೀ ಕ್ರೀಸ್‌ನಲ್ಲಿ ನಿಂತಿದ್ದ ರಾಹುಲ್ ಆಟಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ವಿಶ್ವ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡುವುದೇ ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಅದರಲ್ಲೂ ಸುದೀರ್ಘ ಅವಧಿಗೆ ಕ್ರೀಸ್‌ನಲ್ಲಿ ನಿಂತು ಶತಕ ಸಿಡುವುದೇ ಒಂದು ದಾಖಲೆ. ಶತಕ ಸಿಡಿಸಿ ದಿನದಾಟದ ಬಳಿಕ ಪೆವಿಲಿಯನ್‌ಗೆ ವಾಪಸಾದ ರಾಹುಲ್ ಅವರನ್ನು ಟೀಮ್ ಇಂಡಿಯಾ ಆಟಗಾರರ ಅಭಿನಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಸಿಸಿಐ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದೆ.

    ಇದನ್ನೂ ಓದಿ: ಪಾಂಡ್ಯ ಸಹೋದರರು ಮುಂಬೈನಲ್ಲಿ ಖರೀದಿಸಿದ ಮನೆಯ ಮೊತ್ತವೆಷ್ಟು ಗೊತ್ತಾ?, 

    ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ ಕರ್ನಾಟಕ 3ನೇ ಹಾಗೂ ಭಾರತದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕರ್ನಾಟಕದ ಜಿಆರ್ ವಿಶ್ವನಾಥ್ (1979) ಹಾಗೂ ರಾಹುಲ್ ದ್ರಾವಿಡ್ (2011) ಈ ಸಾಧನೆ ಮಾಡಿದ್ದರು. ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ ಸಾಧಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 127 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ರಾಹುಲ್, ಓಲಿ ರಾಬಿನ್‌ಸನ್ ಎಸೆದ ಓವರ್‌ನ ಮೊದಲ ಎಸೆತದಲ್ಲಿ 2 ರನ್ ಕಸಿದು ಉತ್ತಮ ಆರಂಭದ ನಿರೀಕ್ಷೆ ಮೂಡಿಸಿದರು. ಆದರೆ, 2ನೇ ಎಸೆತದಲ್ಲೇ ಸಿಬ್ಲೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರಿಂದ ದ್ವಿಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts