More

    ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನಲ್ಲಿ ಕೆಕೆಆರ್​ನಿಂದ 11,367 ಕೋಟಿ ರೂ. ಹೂಡಿಕೆ

    ನವದೆಹಲಿ: ಅಮೆರಿಕ ಮೂಲದ ಖಾಸಗಿ ಈಕ್ವಿಟಿ ಕಂಪನಿ ಕೆಕೆಆರ್​ ರಿಲಯನ್ಸ್​ ಇಂಡಸ್ಟ್ರೀಸ್​ ಒಡೆತನದ ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನ ಶೇ.2.32 ಷೇರನ್ನು ಖರೀದಿಸಿದೆ. ಇದಕ್ಕಾಗಿ ಅದು 11,367 ಕೋಟಿ ರೂ. ಹೂಡಿಕೆ ಮಾಡುತ್ತಿದೆ.

    ಈ ಹೂಡಿಕೆಯಿಂದಾಗಿ ರಿಲಯನ್ಸ್​ ಇಂಡಸ್ಟ್ರೀಸ್​ನ ಜಿಯೋ ಪ್ಲಾಟ್​ಫಾರಂನ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ.ಗೆ ಮತ್ತು ಎಂಟರ್​ಪ್ರೈಸ್​ ಮೌಲ್ಯ 5.16 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.

    ಇದನ್ನೂ ಓದಿ: ನಾವ್​ ಮನೀಗ್​ ಹೋಗಾಂಗಿಲ್ಲಾ… ಪಾಕಿಸ್ತಾನ ವಲಸಿಗರ ಹಾಡುಪಾಡು…

    ಕಳೆದ ತಿಂಗಳಿನಿಂದ ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನಲ್ಲಿ ಜಾಗತಿಕವಾಗಿ ಹೂಡಿಕೆಯನ್ನು ಆಕರ್ಷಿಸಲಾಗುತ್ತಿದೆ. ಪ್ರತಿಷ್ಠಿತ ಫೇಸ್​ಬುಕ್​ನಿಂದ ಆರಂಭಗೊಂಡು, ಸಿಲ್ವರ್​ಲೇಕ್​, ವಿಸ್ಟಾ ಮತ್ತು ಜನರಲ್​ ಅಟ್ಲಾಂಟಿಕ್​ ಸೇರಿ ಇದುವರೆಗೆ 4 ಕಂಪನಿಗಳು ಹೂಡಿಕೆ ಮಾಡಿದ್ದವು. ಇದೀಗ 5ನೇ ಕಂಪನಿಯಾಗಿ ಕೆಕೆಆರ್​ ಈ ಕೂಟವನ್ನು ಸೇರಿಕೊಂಡಿದೆ. ತನ್ಮೂಲಕ ಈ ಐದು ಕಂಪನಿಗಳಿಂದ ರಿಲಿಯನ್ಸ್​ ಜಿಯೋಗೆ ಒಟ್ಟಾರೆ 78,562 ಕೋಟಿ ರೂ. ಹೂಡಿಕೆ ಹರಿದುಬಂದಿದೆ.

    ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನಲ್ಲಿ ಕೆಕೆಆರ್​ನಂಥ ಜಾಗತಿಕ ಕಂಪನಿ ಹೂಡಿಕೆ ಮಾಡಲು ಮುಂದಾಗಿರುವುದಕ್ಕೆ ಹರ್ಷವಾಗುತ್ತಿದೆ. ಆ ಕಂಪನಿಯ ಈ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಹೇಳಿದ್ದಾರೆ.

    ಲಾಕ್​ಡೌನ್​ನಲ್ಲಿ ಆಶ್ರಯ ಕೋರಿ ಸ್ನೇಹಿತನ ಮನೆಗೆ ಬಂದ- ಅವನ ಪತ್ನಿಯ ನೋಡಿದ… ಮುಂದೆ ಎಲ್ಲವೂ ಅಲ್ಲೋಲ ಕಲ್ಲೋಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts