More

    VIDEO: 2011ರಲ್ಲಿ ಕೆಕೆಆರ್ ತಂಡ ಗೌತಮ್ ಗಂಭೀರ್ ಕೊಂಡುಕೊಳ್ಳಲು ಕಾರಣವೇನು ಗೊತ್ತೇ..?

    ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ಗೌತಮ್​ ಗಂಭೀರ್​, ಐಪಿಎಲ್​ನ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 2012 ಹಾಗೂ 2014ರಲ್ಲಿ ಗಂಭೀರ್​ ನಾಯಕತ್ವದಲ್ಲಿಯೇ ಕೆಕೆಆರ್​ ಪ್ರಶಸ್ತಿ ಜಯಿಸಿತ್ತು. ಆರಂಭಿಕ ಮೂರು ಆವೃತ್ತಿಗಳಲ್ಲಿ ನೀರಸ ನಿರ್ವಹಣೆ ತೋರಿದ್ದ ಕೆಕೆಆರ್​ 2011ರಲ್ಲಿ ಮಾಜಿ ನಾಯಕ ಸೌರವ್​ ಗಂಗೂಲಿ ಅವರನ್ನು ತಂಡದಿಂದ ಕೈಬಿಟ್ಟು ಹೊಸ ತಂಡ ಕಟ್ಟಲು ಯತ್ನಿಸಿತ್ತು. 2011ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಗಂಭೀರ್​ ಕೊಳ್ಳಲು ಕೆಕೆಆರ್​ ಸಾಕಷ್ಟು ಕಸರತ್ತು ನಡೆಸಿತ್ತು. ಈ ವಿಷಯವನ್ನು ಸ್ವತಃ ತಂಡದ ಸಿಇಒ ವೆಂಕಿ ಮೈಸೂರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ

    ಯೂಟ್ಯೂಬ್​ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿರುವ ವೆಂಕಿ ಮೈಸೂರು, 2011ರ ಆಟಗಾರರ ಹರಾಜಿನಲ್ಲಿ ಮೊದಲ ಹೆಸರೇ ಗಂಭೀರ್​ ಅವರದಾಗಿತ್ತು. ನಮಗೆ ನಂಬಲಿಕೆ ಆಗಲಿಲ್ಲ. ಗಂಭೀರ್​ ಕೊಂಡುಕೊಳ್ಳಬೇಕು ಅಂತ ನಿರ್ದಿಷ್ಟ ಬಜೆಟ್​ ನಿಗದಿಪಡಿಸಿಕೊಂಡಿದ್ದೇವು, ಆದರೆ, ನಮಗೆ ಕೊಚ್ಚಿ ಟಸ್ಕರ್ಸ್​ ಗಂಭೀರ್​ ಕೊಂಡುಕೊಳ್ಳಲು ಪ್ರಬಲ ಪೈಪೋಟಿ ನೀಡಿತ್ತು. ಇಬ್ಬರ ನಡುವೆ ನಾಯಿ-ಜಗಳದ ರೀತಿ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಗಂಭೀರ್​ ನಮ್ಮ ಪಾಲಾದರು. ಉಳಿದೆಲ್ಲವೂ ಇತಿಹಾಸ ಎಂದು ಗಂಭೀರ್​ ಹೇಳಿಕೊಂಡಿದ್ದಾರೆ. ಗಂಭೀರ್​ ಅವರನ್ನು 11.04 ಕೋಟಿ ರೂಪಾಯಿಗೆ ಕೆಕೆಆರ್​ ಖರೀದಿಸಿತ್ತು.

    ಇದನ್ನೂ ಓದಿ: ಒಂದು ತಪ್ಪು ಎಲ್ಲವನ್ನೂ ಕೆಡಿಸಬಹುದು, ಆರ್‌ಸಿಬಿ ಆಟಗಾರರಿಗೆ ಕೊಹ್ಲಿ ಎಚ್ಚರಿಕೆ

    ಗೌತಮ್​ ಗಂಭೀರ್​ ಕೆಕೆಆರ್​ ಪರ ಇದುವರೆಗೂ ಅತಿಹೆಚ್ಚು ರನ್​ ಕಲೆಹಾಕಿದ ಬ್ಯಾಟ್ಸ್​ಮನ್​ ಎನಿಸಿದ್ದಾರೆ. 122 ಪಂದ್ಯಗಳಿಂದ 3345 ರನ್​ ಗಳಿಸಿದ್ದಾರೆ. ಇದರಲ್ಲಿ 30 ಅರ್ಧಶತಕಗಳು ಒಳಗೊಂಡಿವೆ. ಬಳಿಕ 2018ರಲ್ಲಿ ಗಂಭೀರ್​ ಡೆಲ್ಲಿ ತಂಡಕ್ಕೆ ವಾಪಸಾದರು. ಅಂದಿನಿಂದ ಕೆಕೆಆರ್​ ತಂಡವನ್ನು ದಿನೇಶ್​ ಕಾರ್ತಿಕ್ ಮುನ್ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts