More

    ಕೆಜಿಎಫ್​-2 ಹಿಂದಿ ಆವೃತ್ತಿಯಲ್ಲೇ 300 ಕೋಟಿ ರೂ.ಗಳಿಕೆ!

    ಮುಂಬೈ: ಕೆಜಿಎಫ್​-2 ದಿನಕ್ಕೊಂದು ದಾಖಲೆ ಬರೆಯುವ ಮೂಲಕ ಬಾಲಿವುಡ್​ ದಕ್ಷಿಣ ಭಾರತ ಸಿನಿಮಾಗಳಿಂದ ಹೆಚ್ಚು ತಲೆಕೆಡಿಸಿಕೊಳ್ಳುವಂತಾಗಿದೆ. ಈ ನಡುವೆ ಬಾಲಿವುಡ್​ ಪ್ರೇಕ್ಷಕರನ್ನು ದಕ್ಷಿಣ ಸಿನಿಮಾಗಳು ಸೆಳೆದಿರುವುದು ಬಾಲಿವುಡ್​ನ್ನು ಕಂಗೆಡುವಂತೆ ಮಾಡಿದೆ.

    ಕೇವಲ ಹಿಂದಿ ಆವೃತ್ತಿಯಲ್ಲೇ 300 ಕೋಟಿ ರೂ. ಗಳಿಕೆ ಕಾಣುವ ಮೂಲಕ ಬಾಲಿವುಡ್​​ನ್ನು ಬೆಚ್ಚಿಬೀಳಿಸಿದೆ. ಎರಡನೇ ವಾರದಲ್ಲೇ 268 ಕೋಟಿ ರೂ ಗಳಿಕೆ ಕಂಡಿತ್ತು.

    ಮೊದಲ ವಾರವೇ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಕೆಜಿಎಫ್​-2 ಪಾತ್ರವಾಗಿದೆ. ಸಾಮಾನ್ಯವಾಗಿ ಬಾಲಿವುಡ್​ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಹೆಚ್ಚು ದಿನ ಪ್ರದರ್ಶನ ಕಾಣುವುದೇ ದೊಡ್ಡ ವಿಷಯ. ಆದರೆ ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ ಇರುವುದು ಇತ್ತೀಚಿನ ಕೆಲ ಸಿನಿಮಾಗಳೆ ನಿದರ್ಶನವಾಗಿವೆ.

    ಒಟ್ಟು 650 ಕೋಟಿ ರೂ. ದಾಟಿರುವ ಕೆಜಿಎಫ್​-2 ಇನ್ನು ಯಾವ್ಯಾವ ದಾಖಲೆ ಮುರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts