More

    ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯ

    ಗಂಗಾವತಿ: ಬೆಳಗಾವಿಯ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚನ್ನಮ್ಮ ಮತ್ತು ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ಸದಸ್ಯರು ನಗರದ ಮಿನಿವಿಧಾನಸೌಧದ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ರೇಣುಕಾರಿಗೆ ಮನವಿ ಸಲ್ಲಿಸಿದರು.

    ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿ, ಸಮುದಾಯವನ್ನು ಪ್ರವರ್ಗ 2ಎ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರೂ ಇದುವರೆಗೂ ಈಡೇರಿಲ್ಲ. ಶೈಕ್ಷಣಿಕ ಮತ್ತು ಔದ್ಯೋಗಿಕ ನೇಮಕದ ಮೀಸಲನ್ನು ರಾಜ್ಯ ಸರ್ಕಾರ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಜಾತಿ ಪ್ರಮಾಣ ಪತ್ರ ವಿತರಣೆ ಜತೆಗೆ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸುವರ್ಣ ಸೌಧದ ಮುಂದೆ ಸ್ಥಾಪಿಸಬೇಕು. ಚನ್ನಮ್ಮನವರ ಐಕ್ಯಮಂಟಪ, ಅಮಟೂರ ಬಾಳಪ್ಪ, ವಡ್ಡರ ಯಲ್ಲಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯ ಹೋರಾಟಗಾರ ಸ್ಥಳ ರಾಷ್ಟ್ರೀಯ ಸ್ಮಾರಕಗಳನ್ನಾಗಿ ರೂಪಿಸಬೇಕು. ಕಿತ್ತೂರು ಪ್ರಾಧಿಕಾರವನ್ನು ರಾಷ್ಟ್ರೀಯ ಪ್ರಾಧಿಕಾರವನ್ನಾಗಿ ೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

    ನಗರಸಭೆ ಸದಸ್ಯ ನವೀನ್ ಮಾಲಿ ಪಾಟೀಲ್, ಪದಾಧಿಕಾರಿಗಳಾದ ಬಸವರಾಜ ರಾಮತ್ನಾಳ್, ಎ.ಕೆ.ಮಹೇಶ, ವಿನಯಪಾಟೀಲ್, ವಿರೇಶ ಸುಳೇಕಲ್, ಟಿ.ಮಂಜುನಾಥ, ಮಹಾಲಿಂಗಪ್ಪ ಬನ್ನಿಕೊಪ್ಪ, ಚನ್ನವೀರನಗೌಡ ಆರಾಳ್,ಜಗದೀಶ ಬೀಳಗಿ, ಎಸ್.ಶಿವರಾಜಗೌಡ, ನಾಗರಾಜ ಬರಗೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts