More

    ಕಿತ್ತೂರು ಚನ್ನಮ್ಮ ಜಯಂತಿ ಚನ್ನಮ್ಮಳ ಶೌರ್ಯ ಅಗಾಧ

    ಹುನಗುಂದ: ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವತಂತ್ರ ಕಹಳೆ ಊದಿದ ಪ್ರಥಮ ದಿಟ್ಟ ಮಹಿಳೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ. ಚನ್ನಮ್ಮಳ ವೀರ ಶೌರ್ಯವನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

    ಪಟ್ಟಣದ ವಾಯವ್ಯ ಸಾರಿಗೆ ಘಟಕದಲ್ಲಿ ಭಾನುವಾರ ಹಮ್ಮಿಕೊಂಡ 245ನೇ ವೀರರಾಣಿ ಕಿತ್ತೂರು ಚನ್ನಮ್ಮಳ ಜಯಂತಿ ಮತ್ತು ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

    ಮಹನೀಯರೆಲ್ಲರ ಜಯಂತಿಗಳನ್ನು ಜಾತ್ಯತೀತ ಮನೋಭಾವದಿಂದ ನಾವೆಲ್ಲರೂ ಒಂದಾಗಿ ಆಚರಿಸಿ ಅವರ ತತ್ವಾದರ್ಶಗಳನ್ನು ಬಿತ್ತರಿಸೋಣ ಎಂದರು.
    ಮುಖಂಡ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ, ದೇಶದ ಸ್ವಾತಂತ್ರೃಕ್ಕೆ ಹೋರಾಡಿದ ಎಲ್ಲ ಮಹಾನ್ ನಾಯಕರು ಸೌಹಾರ್ದದ ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ವಸ್ವರೂಪಿಗಳಾದ ಅವರನ್ನು ಸ್ಮರಿಸಿ ಸದಾಕಾಲ ಅವರಿಗೆ ಋಣಿಯಾಗಿರಬೇಕು ಎಂದರು.

    ಘಟಕ ವ್ಯವಸ್ಥಾಪಕ ಎಸ್.ಆರ್. ಸೊನ್ನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಂಕ್ರಪ್ಪ ನೇಗಲಿ, ಮುಖಂಡ ಮಹಾಂತೇಶ ಅವಾರಿ, ಎಸ್.ಎಚ್. ವಾಲಿಕಾರ, ಸಂಚಾರ ನಿರೀಕ್ಷಕರಾದ ಶೈಲಜಾ ಜಿಗಳೂರ, ಎ.ಆರ್. ಹಿಪ್ಪರಗಿ ಉಪಸ್ಥಿತರಿದ್ದರು.

    ಪ್ರಗತಿ ಪಾಟೀಲ ಪ್ರಾರ್ಥಿಸಿದರು. ಎಸ್.ಪಿ. ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ನಿಯಂತ್ರಣಾಧಿಕಾರಿ ಷಣ್ಮುಖ ಆನೇಹೊಸೂರ ವಂದಿಸಿದರು.

    ಹಿಂದಿನ ನಮ್ಮ ಸರ್ಕಾರದಲ್ಲಿ ಡಿಪೋ ಆರಂಭಿಸಿದ್ದೇನೆ. ಘಟಕಕ್ಕೆ 2 ಪಲ್ಲಕ್ಕಿ ಬಸ್‌ಗಳನ್ನು ನೀಡುವ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ತಿಳಿಸಿದ್ದೇನೆ. ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. 
    ವಿಜಯಾನಂದ ಕಾಶಪ್ಪನವರ, ಶಾಸಕ
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts