More

    VIDEO: ಕೋಳಿಮರಿಗಳ ವಿಡಿಯೋ ಶೇರ್​ ಮಾಡಿದ ಕಿರಣ್​ ಬೇಡಿ; ನಿಮ್ಮ ವಾಟ್ಸ್​​ಆ್ಯಪ್​ ತೆಗೆದುಹಾಕಿ ಎಂದ ನೆಟ್ಟಿಗರು

    ಕರೊನಾ ವೈರಸ್​ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಸುಳ್ಳು ಮಾಹಿತಿಗಳು, ಫೇಕ್​ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ತುಳುಕುತ್ತಿವೆ. ವಾಟ್ಸ್​ಆ್ಯಪ್​ನಲ್ಲೂ ತಪ್ಪು ಮಾಹಿತಿಗಳನ್ನೊಳಗೊಂಡ ನಕಲಿ ವಿಡಿಯೋಗಳು ಫಾರ್​​ವರ್ಡ್​ ಆಗುತ್ತಿವೆ. ಅನೇಕರು ಅದನ್ನೇ ನಂಬಿ, ಮೋಸ ಹೋಗುತ್ತಿದ್ದಾರೆ.

    ಈಗ ಈ ಸಾಲಿಗೆ ಮಾಜಿ ಪೊಲೀಸ್ ಅಧಿಕಾರಿ, ಸದ್ಯ ಪುದುಚೆರಿಯ ಲೆಫ್ಟಿನಂಟ್​ ಗವರ್ನರ್​ ಆಗಿರುವ ಕಿರಣ್​ ಬೇಡಿ ಸೇರ್ಪಡೆಯಾಗಿದ್ದಾರೆ.

    ಟ್ವಿಟರ್​ನಲ್ಲಿ ಅನೇಕ ಕೋಳಿ ಮರಿಗಳು ಓಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿದ ಕಿರಣ್ ಬೇಡಿ, ಕರೊನಾ ವೈರಸ್​ ಭಯದಿಂದ ಮೊಟ್ಟೆಗಳನ್ನು ಎಸೆಯಲಾಗಿತ್ತು. ಒಂದುವಾರದ ಬಳಿಕ ಅದೇ ಮೊಟ್ಟೆಯೊಡೆದು ಹೊರಬಂದ ಕೋಳಿ ಮರಿಗಳು ಇವು ಎಂದು ಬರೆದುಕೊಂಡಿದ್ದರು.

    ಒಂದು ರಸ್ತೆ ಮತ್ತು ಅದರ ಅಕ್ಕಪಕ್ಕದ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಮರಿಗಳು ಅಲ್ಲಲ್ಲಿ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ವ್ಯಕ್ತಿಯೋರ್ವ ಆ ಕೋಳಿಮರಿಗಳನ್ನು ತೋರಿಸಲೆಂದೇ ವಿಡಿಯೋ ಮಾಡಿದಂತಿದೆ.

    ಈ ವಿಡಿಯೋ ವಾಟ್ಸ್​ಆ್ಯಪ್​ನಲ್ಲೆಲ್ಲ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದನ್ನೇ ಶೇರ್​ ಮಾಡಿಕೊಂಡ ಕಿರಣ್​ ಬೇಡಿ, ಕರೊನಾ ವೈರಸ್​ ಭಯ ಇರುವುದರಿಂದ ಜನರು ಚಿಕನ್​, ಮೊಟ್ಟೆ ತಿನ್ನಲು ಭಯಪಡುತ್ತಿದ್ದಾರೆ. ಹಾಗಾಗಿ ಮೊಟ್ಟೆಗಳನ್ನೆಲ್ಲ ಹೀಗೆ ಎಸೆಯಲಾಗಿತ್ತು. ಒಂದು ವಾರದ ಬಳಿಕ ಅವೆಲ್ಲ ಒಡೆದು ಮರಿಗಳಾಗಿವೆ. ಇದು ನಿಸರ್ಗ ಸೃಷ್ಟಿ ಎಂದು ಬರೆದಿದ್ದಾರೆ.

    ಕಿರಣ್ ಬೇಡಿಯವರು ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೇ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಲು ಶುರು ಮಾಡಿದ್ದಾರೆ.
    ಇದೊಂದು ಸುಳ್ಳು ಮಾಹಿತಿ ಹೊಂದಿರುವ ವಿಡಿಯೋ. ಮೊದಲು ನಿಮ್ಮ ವಾಟ್ಸ್​​ಆ್ಯಪ್​ನ್ನು ಅನ್​ಇನ್ಸ್ಟಾಲ್​ ಮಾಡಿಕೊಳ್ಳಿ ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.

    ಮೊಟ್ಟೆಗಳನ್ನು ಎಸೆದಿದ್ದರೆ ಅವು ಒಡೆಯುದಿಲ್ಲವಾ. ಹೇಗೆ ಮರಿಗಳು ಹೊರಬರುತ್ತವೆ ಎಂದು ಇನ್ನೋರ್ವರು ಪ್ರಶ್ನಿಸಿದ್ದಾರೆ.
    ಈ ಮಧ್ಯೆ ಕಿರಣ್​ ಬೇಡಿ ಶೇರ್​ ಮಾಡಿದ ವಿಡಿಯೋ 508 ಸಾವಿರ ವೀವ್ಸ್​ ಪಡೆದುಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts