More

    ಪಂಜಾಬ್ ಪ್ಲೇಆಫ್ ಆಸೆಗೆ ಸಿಎಸ್‌ಕೆ ತಣ್ಣೀರು, ಲೀಗ್ ಹಂತದಲ್ಲೇ ಹೊರಬಿದ್ದ ರಾಹುಲ್ ಬಳಗ

    ಅಬುಧಾಬಿ: ಪ್ಲೇಆಫ್ ಹಂತದ ಹೋರಾಟ ಜೀವಂತವಾಗಿರಿಸಿಕೊಳ್ಳಲು ಇದ್ದ ಕಡೇ ಅವಕಾಶ ಕೈಚೆಲ್ಲಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರಿಂದ 2ನೇ ತಂಡವಾಗಿ ಹೊರಬಿದ್ದಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ನಿರ್ಣಾಯಕ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಬಳಗ 9 ವಿಕೆಟ್‌ಗಳಿಂದ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶರಣಾಯಿತು. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದ್ದ ಸಿಎಸ್‌ಕೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳಿತು.
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ದೀಪಕ್ ಹೂಡಾ (62*ರನ್, 30 ಎಸೆತ, 3 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಲುಂಗಿ ಎನ್‌ಗಿಡಿ (39ಕ್ಕೆ 3) ಮಾರಕ ದಾಳಿಗೆ ನಲುಗಿ 6 ವಿಕೆಟ್‌ಗೆ 153 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಸಿಎಸ್‌ಕೆ, ಋತುರಾಜ್ ಗಾಯಕ್ವಾಡ್ (62*ರನ್, 49 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಫಾಫ್ ಡು ಪ್ಲೆಸಿಸ್ (48ರನ್, 34 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಲವಾಗಿ 18.5 ಓವರ್‌ಗಳಲ್ಲಿ 1 ವಿಕೆಟ್‌ಗೆ 154 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
    ಕಿಂಗ್ಸ್ ಇಲೆವೆನ್ ಪಂಜಾಬ್: 6 ವಿಕೆಟ್‌ಗೆ 153 (ದೀಪಕ್ ಹೂಡಾ 62*, ರಾಹುಲ್ 29, ಮಯಾಂಕ್ ಅಗರ್ವಾಲ್ 26, ಎನ್‌ಗಿಡಿ 39ಕ್ಕೆ 3), ಸಿಎಸ್‌ಕೆ: 18.5 ಓವರ್‌ಗಳಲ್ಲಿ 1 ವಿಕೆಟ್‌ಗೆ 154 (ಋತುರಾಜ್ ಗಾಯಕ್ವಾಡ್ 62*, ಪ್ಲೆಸಿಸ್ 48, ಅಂಬಟಿ ರಾಯುಡು 30*, ಕ್ರಿಸ್ ಜೋರ್ಡಾನ್ 31ಕ್ಕೆ 1). 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts