More

    ಮೃಗಾಲಯದ ಒಳಹೋಗುತ್ತಿದ್ದಂತೆ ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ನೋಡಿ ಪ್ರವಾಸಿಗ ಶಾಕ್​..!

    ಅಬುಜಾ: ನೈಜಿರಿಯಾ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗನಿಗೆ ಹಸಿವಿನಿಂದ ಬಳಲಿ, ಅಸ್ಥಿಪಂಜರ ಕಾಣುವ ರೀತಿ ನಿತ್ರಾಣವಾಗಿದ್ದ ಕಾಡಿನ ರಾಜ ಸಿಂಹವನ್ನು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಕೇವಲ ಸಿಂಹವಲ್ಲದೆ, ಅನೇಕ ಪ್ರಾಣಿಗಳು ಸಹ ಮೃಗಾಲಯದಲ್ಲಿ ತೀವ್ರ ಪರಿಣಾಮ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವನ್ಯಜೀವಿ ಚಾರಿಟಿ ಹಾಗೂ ಮೆನ್ಸ್​ ಡಿಸ್ಕವರಿ ತಂಡ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಗಂಡು ಸಿಂಹವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅದನ್ನು ಮರಳಿ ಅಭಯಾರಣ್ಯಕ್ಕೆ ಬಿಡುವುದಕ್ಕೂ ಮೊದಲು ಅದರ ಆರೋಗ್ಯ ದೃಢಪಡಿಸಿಕೊಳ್ಳಬೇಕಾಗಿದೆ. ಆದರೆ, ಸಿಂಹವು ಬಹು ದಿನಗಳವರೆಗೆ ಬದುಕುಳಿಯುತ್ತಾ ಎಂಬುದು ಇದೀಗ ಪ್ರಶ್ನೆಯಾಗಿದೆ.

    ಇದನ್ನೂ ಓದಿ: PHOTOS| ಬಯಲಾಯ್ತು ಪ್ರೀ ವೆಡ್ಡಿಂಗ್​ ಫೋಟೋಶೂಟ್ ದುರಂತ ಹಿಂದಿನ ಕಾರಣ: ನವಜೋಡಿಯ ಕೊನೇ ಕ್ಷಣಗಳಿವು!

    ಪ್ರವಾಸಿಗರೊಬ್ಬರು ನೈಜಿರಿಯಾದ ಕಾಡುನಾದಲ್ಲಿರುವ ಗಮ್ಜಿ ಗೇಟ್​ ಮೃಗಾಲಯಕ್ಕೆ ಭೇಟಿ ನೀಡಿದಾಗ ಪ್ರಾಣಿಗಳು ವಸ್ತು ಸ್ಥಿತಿ ಬಯಲಾಗಿದೆ. ಒಂದು ಡಾಲರ್​ ನೀಡಿ ಮೃಗಾಯಲ ಪ್ರವೇಶಿದಿ ಪ್ರವಾಸಿಗ ತನ್ನ ಕ್ಯಾಮೆರಾ ಕಣ್ಣಿಂದ ಇಡೀ ಮೃಗಾಲಯದ ಚಿತ್ರಣವನ್ನು ಸೆರೆಹಿಡಿದಿದ್ದು, ತುಂಬಾ ನಿತ್ರಾಣವಾಗಿರುವ ಪ್ರಾಣಿಗಳ ಸ್ಥಿತಿ ನೋಡಿದರೆ ಮನಕಲಕುವಂತಿದೆ.

    ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಮೃಗಾಲಯ ಸಿಬ್ಬಂದಿಯ ನಿರ್ಲಕ್ಷ್ಯ ವಿರುದ್ಧ ಪ್ರಾಣಿ ಪ್ರಿಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಚಾರಿಟಿಗೆ ಪ್ರವಾಸಿಗ ನೀಡಿದ ಮಾಹಿತಿ ಬಳಿಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದೆ.

    ಸಿಂಹ ಮಾತ್ರವಲ್ಲದೆ, ಮಂಗ, ಮೊಸಳೆ, ತೋಳ ಸೇರಿದಂತೆ ಇನ್ನು ಅನೇಕ ಪ್ರಾಣಿಗಳು ಮೃಗಾಲಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿವೆ. (ಏಜೆನ್ಸೀಸ್​)

    ಸ್ನೇಹಿತನ ಜತೆ​ ಪಬ್​ಗೆ ಹೋಗಿದ್ದ ಮೆಡಿಕಲ್​ ವಿದ್ಯಾರ್ಥಿನಿಯ ದುರಂತ ಸಾವು: ನ. 9ರ ರಾತ್ರಿ ನಡೆದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts