More

    ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ

    ನವದೆಹಲಿ: ಶ್ರೀ ರಾಮಕೃಷ್ಣ ತಪೋವನಂ ಆಶ್ರಮದ ಸ್ವಾಮಿ ಚಿದ್ಭಾವಾನಂದರು ರಚಿಸಿರುವ ‘ಭಗವದ್​​ ಗೀತಾ’ ಪುಸ್ತಕದ ಕಿಂಡಲ್ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಿದರು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, “ಈಬುಕ್​ಗಳು ಯುವಜನರಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿದೆ. ಆದ್ದರಿಂದ ಈ ಪ್ರಯತ್ನವು ಗೀತೆಯ ಉನ್ನತ ವಿಚಾರಗಳೊಂದಿಗೆ ಹೆಚ್ಚು ಯುವಜನರಿಗೆ ಸಂಪರ್ಕ ಕಲ್ಪಿಸುವಲ್ಲಿ ಸಹಾಯಕವಾಗಲಿದೆ” ಎಂದರು.

    “ಕರೊನಾ ಮಹಾಮಾರಿಯ ವಿರುದ್ಧ ಜಗತ್ತು ಕಷ್ಟವಾದ ಹೋರಾಟ ನಡೆಸುತ್ತಿದೆ. ಇದರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು ವಿಪರೀತವಾಗಿವೆ. ಇಂಥ ಸಮಯದಲ್ಲಿ ಭಗವದ್ಗೀತೆ ತೋರಿಸುವ ದಾರಿ ಬಹಳ ಪ್ರಸ್ತುತವಾಗುತ್ತದೆ” ಎಂದ ಮೋದಿ, “ಮಾನವ ಜನಾಂಗ ಎದುರಿಸುತ್ತಿರುವ ಸವಾಲುಗಳಲ್ಲಿ ಮತ್ತೊಮ್ಮೆ ವಿಜಯ ಸಾಧಿಸಲು ಗೀತೆಯು ಶಕ್ತಿ ಮತ್ತು ದಿಕ್ಕನ್ನು ಒದಗಿಸಬಲ್ಲದು” ಎಂದರು.

    ಇದನ್ನೂ ಓದಿ: ಕರೊನಾ ಪರೀಕ್ಷೆ : ಬೋಗಸ್​ ವರದಿ ನೀಡುತ್ತಿದ್ದ ಲ್ಯಾಬ್​ಗಳ ಮಾನ್ಯತೆ ರದ್ದು

    ಇತ್ತೀಚೆಗೆ ಜಗತ್ತಿಗೆ ಔಷಧಿಗಳ ಅಗತ್ಯವಿತ್ತು. ಆಗ ಭಾರತ ತನ್ನಿಂದಾಗುವ ಸಹಾಯವನ್ನು ಮಾಡಿತು. ಮೇಡ್​ ಇನ್​ ಇಂಡಿಯಾ ಲಸಿಕೆಗಳು ಜಗತ್ತಿನ ವಿವಿಧ ಭಾಗಗಳಿಗೆ ಹೋಗುತ್ತಿರುವುದು ಸಂತೋಷದ ವಿಚಾರ. ನಾವು ಮಾನವ ಜನಾಂಗಕ್ಕೆ ಸಹಾಯ ಮಾಡಲು ಇಚ್ಛಿಸುತ್ತೇವೆ. ಇದೇ ಗೀತೆ ನಮಗೆ ಹೇಳಿಕೊಡುವ ಪಾಠ ಎಂದ ಮೋದಿ, ಗೀತೆಯಿಂದ ಪ್ರೇರಣೆ ಪಡೆದವರು ಸ್ವಭಾವತಃ ಅಂತಃಕರಣವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.

    ತಮಿಳುನಾಡಿನ ತಿರುಚಿರಾಪಲ್ಲಿಯ ತಿರುಪ್ಪರೈತುರೈನಲ್ಲಿರುವ ಶ್ರೀ ರಾಮಕೃಷ್ಣ ತಪೋವನಂ ಆಶ್ರಮದ ಸ್ಥಾಪಕರಾದ ಸ್ವಾಮಿ ಚಿದ್ಭವಾನಂದಜಿ ಅವರು 186 ಪುಸ್ತಕಗಳ ರಚನಾಕಾರರಾಗಿದ್ದಾರೆ. ಭಗವದ್ಗೀತೆಯ ಸಾರಾಂಶವನ್ನು ವಿವರಿಸುವ ಅವರ ‘ಭಗವದ್​​ ಗೀತ’ ಪುಸ್ತಕವು ಈ ವಿಚಾರದಲ್ಲಿ ಮಹತ್ವ ಪಡೆದಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ದ್ವಿತೀಯ ಪಿಯು ವಿದ್ಯಾರ್ಥಿ ಕೊಲೆ! ಪಬ್ಲಿಕ್​ ಟಾಯ್ಲೆಟ್​ನಲ್ಲಿ ಆ ರಾತ್ರಿ ನಡೆದಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts