More

    ಮಕ್ಕಳು ಮೊಬೈಲ್ ಗೀಳಿನಿಂದ ಹೊರಬನ್ನಿ


    ಕೊಡಗು : ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ವಿನಾಯಕ ಭಜನಾ ಮಂಡಳಿಯ ಸಹಯೋಗದಲ್ಲಿ 4 ದಿನಗಳ ಉಚಿತ ಕುಣಿತ ಭಜನೆ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.


    ಬೆಳ್ತಂಗಡಿಯ ಪ್ರಸಿದ್ಧ ಕುಣಿತ ಭಜನೆಯ ತರಬೇತುದಾರ ಹರೀಶ್ ನೆರಿ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಾವ ಮನೆಯಲ್ಲಿ ನಿತ್ಯ ತಾಳದ ಸದ್ದು ಕೇಳಿಸುತ್ತದೋ ಅಂತಹ ಮನೆಗೆ ಬೇರೆ ಸುರಕ್ಷಿತ ಸಾಧನಗಳ ಅಗತ್ಯವಿಲ್ಲ. ಮಕ್ಕಳು ಮೊಬೈಲ್ ಅನ್ನು ಅತಿಯಾಗಿ ಬಳಸದೇ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಸನಾತನ ಸಂಸ್ಕೃತಿಯ ವಿಚಾರಧಾರೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.


    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಊರಿನ ಹಿರಿಯರಾದ ವೀಣಾ ಮಾತನಾಡಿ, ಭೂ ಗರ್ಭದ ಆಳದಲ್ಲಿ ನೀರಿನ ವರತೆ ತುಂಬಿರುವಂತೆ ಪ್ರತಿಯೊಬ್ಬರ ಅಂತರಾಳದಲ್ಲೂ ದೈವೀಕತೆ ತುಂಬಿರುತ್ತದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.


    ತರಬೇತುದಾರ ಕೀರ್ತಿ ಧರ್ಮಸ್ಥಳ, ವಿನಾಯಕ ಭಜನಾ ಮಂಡಳಿ ಸದಸ್ಯರಾದ ಗೀತಾನಂದ, ಸುಮನಾ, ನಾಗವೇಣಿ, ಸಂಗೀತಾ, ಲಕ್ಷ್ಮೀ, ಜ್ಯೋತಿ ವೇಣುಗೋಪಾಲ್, ಜ್ಯೋತಿ ಸಂತೋಷ್ ಇತರರು ಇದ್ದರು. 35ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts