More

    ಮೂತ್ರಪಿಂಡಗಳು ಆರೋಗ್ಯವಾಗಿರಬೇಕೆಂದರೆ ಏನು ಮಾಡಬೇಕು ಗೊತ್ತೇ?

    * ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಅಭ್ಯಸಿಸಬಹುದಾದ ಮುದ್ರೆಗಳು ಹಾಗೂ ಯೋಗಾಸನಗಳನ್ನು ತಿಳಿಸಿ.

    | ರೂಪಾ 32 ವರ್ಷ, ಬೆಂಗಳೂರು

    ಮೂತ್ರಪಿಂಡಗಳು ಆರೋಗ್ಯವಾಗಿರಬೇಕೆಂದರೆ ಏನು ಮಾಡಬೇಕು ಗೊತ್ತೇ?ಮೂತ್ರಪಿಂಡಗಳ ಸಾಮಾನ್ಯ ಕಾರ್ಯಗಳೆಂದರೆ, ರಕ್ತದಲ್ಲಿನ ತ್ಯಾಜ್ಯ ಮತ್ತು ವಿಷವನ್ನು ಫಿಲ್ಟರ್ ಮಾಡುವುದು, ದೇಹದಲ್ಲಿನ ದ್ರವಗಳನ್ನು ನಿಯಂತ್ರಿಸುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಹಾಮೋನುಗಳನ್ನು ಉತ್ಪಾದಿಸುವುದು. ಮೂತ್ರಪಿಂಡಗಳು ಹಾನಿಗೊಳಗಾಗಿದ್ದರೆ ಮತ್ತು ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದಿದ್ದರೆ ತೊಂದರೆಗಳಿಗೆ ಕಾರಣವಾಗಬಹುದು.

    ಯೋಗವು ದೈಹಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಂಯೋಜಿಸುತ್ತದೆ. ಅದು ದೇಹವನ್ನು ಪುನಶ್ಚೇತನಗೊಳಿಸಲು ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಯೋಗದಲ್ಲಿನ ಕೆಲವು ಭಂಗಿಗಳು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಮೂತ್ರಪಿಂಡದ ಕಾರ್ಯಗಳನ್ನೂ ಸಕ್ಷಮಗೊಳಿಸುತ್ತವೆ.

    ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಯೋಗಾಭ್ಯಾಸ ಮತ್ತು ಮುದ್ರೆಗಳ ಅಭ್ಯಾಸ ಅತ್ಯುತ್ತಮ ದೈಹಿಕ ಚಿಕಿತ್ಸೆಯಾಗಿದೆ. ಮೂತ್ರಪಿಂಡಗಳ ಒಟ್ಟಾರೆ ಆರೋಗ್ಯದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಆಸನಗಳನ್ನು ಸಮರ್ಪಕವಾಗಿ ಅಭ್ಯಾಸ ಮಾಡಿದಾಗ ಮೂತ್ರಕೋಶದ ಭಾಗಗಳು ಎಳೆತಕ್ಕೆ ಒಳಗಾಗಿ ನರಗಳು ಪುನಶ್ಚೇತನಗೊಳ್ಳುತ್ತದೆ.

    ಕೆಲವು ಆಸನಗಳನ್ನು ಅಭ್ಯಾಸ ಮಾಡಿದಾಗ ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಜನನೇಂದ್ರಿಯ ಇವನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ. ಯೋಗಾಸನಗಳಲ್ಲಿ ಸುಲಭ ಹಾಗೂ ಸರಳ ಯೋಗಾಸನವಾದ ಬದ್ಧಕೋಣಾಸನ ಈ ನಿಟ್ಟಿನಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ.

    ಸೂಚಿತ ಮುದ್ರೆಗಳು: ಪ್ರಾಣಮುದ್ರೆ, ಜಲೋದರನಾಶಕ ಮುದ್ರೆ, ವರುಣಮುದ್ರೆ, ಮೂತ್ರಾಶಯ ಮುದ್ರೆ, ಸೂರ್ಯಮುದ್ರೆ, ಅಪಾನಮುದ್ರೆ – ಇವುಗಳನ್ನು ಪರಿಣತರಾದ ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.

    ಸೂಚಿತ ಆಸನಗಳು: ಪಾದಹಸ್ತಾಸನ, ಪಾಶ್ವೋತ್ಥಾನಾಸನ, ಬದ್ಧಕೋಣಾಸನ, ಜಾನುಶೀರ್ಷಾಸನ, ಗರ್ಭಪಿಂಡಾಸನ, ಪಶ್ಚಿಮೋತ್ಥಾನಾಸನ, ಮಂಡೂಕಾಸನ, ಅರ್ಧಮತ್ಸ್ಯೇಂದ್ರಾಸನ, ವಕ್ರಾಸನ, ಹಲಾಸನ, ಮಕರಾಸನ, ಧನುರಾಸನ, ಹಲಾಸನ, ಭುಜಂಗಾಸನ, ನಾವಾಸನ, ಶಲಭಾಸನ, ಪವನಮುಕ್ತಾಸನ, ಶವಾಸನ – ಇವುಗಳನ್ನು ಕೂಡ ತಜ್ಞ ಯೋಗಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.

    ಆಹಾರ ಪಥ್ಯ: ಸಾತ್ವಿಕ ಆಹಾರ ಸೇವಿಸಿ. ಮಸಾಲೆ ಬೇಡ.

    * ಯೋಗಸೂತ್ರದಲ್ಲಿ ಪತಂಜಲಿ ಮಹರ್ಷಿಗಳು ಹೇಳಿರುವ ಸುಖ-ದುಃಖ ತರುವ ಚಿತ್ತವೃತ್ತಿಗಳನ್ನು ತಿಳಿಸಿ.

    | ರಾಮಲಿಂಗ 49 ವರ್ಷ, ಹುಣಸೂರು

    ಸುಖ-ದುಃಖ ತರುವ ಐದು ರೀತಿಯ ಚಿತ್ತವೃತ್ತಿಗಳನ್ನು ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ ಹೀಗೆ ಪಟ್ಟಿ ಮಾಡಿದ್ದಾರೆ:

    1. ಪ್ರಮಾಣ (ಅಳತೆ)

    2. ವಿಪರ್ಯಾಯ (ತಪ್ಪಾಗಿ ತಿಳಿಯುವುದು)

    3. ವಿಕಲ್ಪ (ತಪ್ಪು ಕಲ್ಪನೆ)

    4. ನಿದ್ರಾ (ಯಾವುದೇ ರೀತಿಯ ಅನುಭವಗಳು ಇಲ್ಲದಿರುವಿಕೆ)

    5. ವಿಸ್ಮೃತಿ (ಗೋಚರವಿಲ್ಲದಿರುವುದು)

    ಯೋಗಸಾಧನೆಗೆ ಬರುವ ಐದು ಬಗೆಯ ತೊಡಕುಗಳು:

    1. ಅವಿದ್ಯಾ (ಅಧ್ಯಾತ್ಮವಿದ್ಯೆ ಇಲ್ಲದಿರುವುದು)

    2. ಅಸ್ಮಿತ (ಅಹಂಭಾವನೆ)

    3. ರಾಗ (ಆಸಕ್ತಿ)

    4. ದ್ವೇಷ (ಪ್ರೀತಿರಾಹಿತ್ಯ)

    5. ಅಭಿನಿವೇಶ (ಪ್ರಾಪಂಚಿಕ ಜೀವನದಲ್ಲಿ ನಿರಾಸಕ್ತಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts