More

    ಸಾಲ ತೀರಿಸಲು ಶ್ರೀಮಂತರ ಮಗನನ್ನು ಅಪಹರಿಸಿದರು, 2 ಕೋಟಿ ರೂ. ಬೇಡಿಕೆ ಇಟ್ಟರು; 7 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು !

    ಬೆಂಗಳೂರು : ನರ್ಸಿಂಗ್ ಕಾಲೇಜು ಮಾಲೀಕರ 22 ವರ್ಷದ ಪುತ್ರನನ್ನು ಅಪಹರಣ ಮಾಡಿದ ಪ್ರಕರಣಕ್ಕೆ, ಏಳು ಗಂಟೆಗಳ ಮಿಂಚಿನ ಕಾರ್ಯಾಚರಣೆ ನಡೆಸಿ, ಬೆಂಗಳೂರು ನಗರ ಪೊಲೀಸರು ಸುಖಾಂತ್ಯ ಕಾಣಿಸಿದ್ದಾರೆ. ಅಪಹೃತ ಯುವಕನನ್ನು ಜೀವಂತ ಹಿಂತಿರುಗಿಸಲು 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ 7 ಜನ ದುಷ್ಕರ್ಮಿಗಳನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 25 ರ ಮಧ್ಯಾಹ್ನ ನಗರದ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನರ್ಸಿಂಗ್ ಕಾಲೇಜು ನಡೆಸುವವರ ಮಗ ರಜೀಬ್ ಅರಾಪತ್ ಎಂಬುವನನ್ನು ದುಷ್ಕರ್ಮಿಗಳ ಗ್ಯಾಂಗ್ ಒಂದು ಕಿಡ್ನಾಪ್ ಮಾಡಿತು. ನಾಲ್ಕು ಜನರು ಹುಡುಗಿಯನ್ನು ಚುಡಾಯಿಸುತ್ತಿರುವುದಾಗಿ ಆಪಾದನೆ ಮಾಡುತ್ತಾ ಯುವಕನನ್ನು ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದರು. ಆನಂತರ ಪಾಲಕರಿಗೆ ಕರೆ ಮಾಡಿ 2 ಕೋಟಿ ರೂ. ಹಣ ನೀಡಬೇಕು. ಇಲ್ಲವಾದರೆ ಮಗನ ಕೈ ಕಾಲು ಕತ್ತರಿಸಿ ಹತ್ಯೆ ಮಾಡುವುದಾಗಿ ಪ್ರಾಣ ಬೆದರಿಕೆ ಒಡ್ಡಿದ್ದರು. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ನಿಮ್ಮ ಮಗ ಜೀವಂತವಾಗಿ ಮನೆಗೆ ಬರುವುದಿಲ್ಲ ಎಂದು ಹೆದರಿಸಿದ್ದರು.

    ಇದನ್ನೂ ಓದಿ: ಕೊಳೆಗೇರಿಯಲ್ಲಿ ಸಲ್ಯೂಷನ್ ಕಿಕ್! ; ಮತ್ತಿನಲ್ಲಿ ಮಕ್ಕಳು

    ಈ ಬಗ್ಗೆ ದೂರು ಪಡೆದ ತಕ್ಷಣ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ 5 ವಿಶೇಷ ತನಿಖಾ ತಂಡಗಳನ್ನು ರಚಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು. ಯುವಕನನ್ನು ಕಾರಿನಲ್ಲೇ ಕೂರಿಸಿಕೊಂಡು ರಿಂಗ್​ ರೋಡ್​ನಲ್ಲಿ ಸುತ್ತಾಡುತ್ತಾ ಇದ್ದ ಆರೋಪಿಗಳು, ನಂತರ ಬೆಂಗಳೂರು ಗ್ರಾಮಾಂತರ ಭಾಗದ ಯರ್ರಪ್ಪನಹಳ್ಳಿಯ ನಿರ್ಜನ ಪ್ರದೇಶವೊಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಆರೋಪಿಗಳನ್ನು ಏಳು ತಾಸಿನೊಳಗೆ ಪತ್ತೆ ಹಚ್ಚಿ, ಯುವಕನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿರುವ ಪೊಲೀಸರು ಪ್ರಕರಣಕ್ಕೆ ಸುಖಾಂತ್ಯ ನೀಡಿದ್ದಾರೆ.

    ಅಪಹರಣದಲ್ಲಿ ಭಾಗಿಯಾಗಿದ್ದ ಅಬ್ದುಲ್ ಪಹಾದ್, ಜಬೀಉಲ್ಲಾ, ಕೊರೆವಲ್ ಸಲ್ಮಾನ್, ತೌಫಿಕ್, ಗೌತಮ್, ಕಿರಣ್ ಮತ್ತು ತೌಹೀದ್ ಪಾಷಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್​ ಆಗಿದ್ದ ಅಬ್ದುಲ್ ಫಹಾದ್ ಈ ಮುನ್ನವೂ ಬಾಲಕಿಯೊಬ್ಬಳ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

    ಆರೋಪಿಗಳು ತುಂಬಾ ಸಾಲ ಮಾಡಿಕೊಂಡಿದ್ದು, ಅವರಲ್ಲಿ ಒಬ್ಬ ತನ್ನ ತಂಗಿಯ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸುವುದಕ್ಕೋಸ್ಕರ ಅಪರಾಧದಲ್ಲಿ ಶಾಮೀಲಾಗಿದ್ದಾನೆ. ಅಪಹರಣ ಮಾಡಲು ಒಂದು ವಾರದಿಂದ ಸಂಚು ರೂಪಿಸಿ, ಯುವಕನ ದೈನಂದಿನ ಚಲನವಲನಗಳನ್ನು ಗಮನಿಸುತ್ತಿದ್ದರು. ಕೃತ್ಯ ಎಸಗಲು ಒಎಲ್‌ಎಕ್ಸ್‌ನಲ್ಲಿ ಮಾರುತಿ 800 ಕಾರು ಖರೀದಿಸಿದ್ದರು ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

    ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ

    ಎಲೆಕ್ಟೊರಲ್ ಬಾಂಡ್​ಗಳ ವಿರುದ್ಧ ತಡೆಯಾಜ್ಞೆ ಇಲ್ಲ : ಸುಪ್ರೀಂ ಕೋರ್ಟ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts