More

    ಉಜಿರೆ ಬಾಲಕ ಸೇಫ್, ತಂದೆ ವಹಿವಾಟೇ ಕಿಡ್ನ್ಯಾಪ್‌ಗೆ ಕಾರಣ?

    ಮಂಗಳೂರು: ಉಜಿರೆಯಿಂದ ಅಪಹರಣಕ್ಕೊಳಗಾಗಿದ್ದ ೮ ವರ್ಷದ ಬಾಲಕ ಅನುಭವ್‌ನನ್ನು ದಕ್ಷಿಣ ಕನ್ನಡ ಪೊಲೀಸರು ಅಪಹರಣಕಾರರಿಂದ ಬಿಡುಗಡೆಗೊಳಿಸಿದ್ದು ೭ ಮಂದಿ ಕಿಡ್ನಾಪರ್‌ಗಳನ್ನೂ ಬಂಧಿಸಿದ್ದಾರೆ.
    ಬಾಲಕನ ತಂದೆ ಬಿಜೊಯ್‌ ಅವರು ಹಿಂದಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಕೆಲವು ಪರಿಚಯಸ್ಥರಿಗೆ ಹಣ ನೀಡಬೇಕಾಗಿದ್ದು ಆ ಹಿನ್ನೆಲೆಯಲ್ಲಿ ಈ ಕಿಡ್ನಾಪ್‌ ನಡೆಸಿರುವುದಾಗಿ ಶಂಕೆ ವ್ಯಕ್ತವಾಗಿದೆ.
    ಡಿ.೧೭ರಂದು ಸಂಜೆ ಬಾಲಕನನ್ನು ಅಜ್ಜ ಎ.ಕೆ.ಶಿವನ್‌ ಅವರ ಮುಂದೆಯೇ ಅಪಹರಿಸಿ ಕಾರಿನಲ್ಲಿ ಕೊಂಡೊಯ್ಯಲಾಗಿತ್ತು. ಈ ಕುರಿತು ದ.ಕ ಪೊಲೀಸರ ಐದು ತಂಡ ರಚಿಸಿ ತನಿಖೆ ನಡೆಸಲಾಗಿತ್ತು.
    ಬಾಲಕನ ತಂದೆ ಬಿಜೊಯ್‌ ಅವರಿಗೆ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೂಲಕ ಅಪಹರಣಕಾರರು ಸಂದೇಶ ನೀಡುತ್ತಾ ೧೦೦ ಬಿಟ್‌ ಕಾಯಿನ್‌ ನೀಡಿದರೆ ಮಾತ್ರವೇ ಬಾಲಕನನ್ನು ಬಿಡುಗಡೆ ಮಾಡುವುದಾಗಿ ಒತ್ತಾಯಿಸುತ್ತಿತ್ತು.

    ದ.ಕ ಪೊಲೀಸ್ ನೀಡಿರುವ ಮಾಹಿತಿಯನ್ವಯ ಕೋಲಾರ ಪೊಲೀಸರ ತಂಡ 7 ಮಂದಿ ಅಪಹರಣಕಾರರನ್ನು ಬಂಧಿಸಿದೆ.

     

    ಉಜಿರೆ ಬಾಲಕ ಸೇಫ್, ತಂದೆ ವಹಿವಾಟೇ ಕಿಡ್ನ್ಯಾಪ್‌ಗೆ ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts