More

    ‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಮಕ್ಕಳಲ್ಲಿ ಬೆಳಕು ತಂದಿದೆ ಕಿಚ್ಚನ ಆ ಒಂದು ಮಾತು!

    ಹುಬ್ಬಳ್ಳಿ: ‘ಶಾಲೆ ಖಾಲಿ ಮಾಡ್ಬೇಡಿ.. ನಾನು ಓದಿ ದೊಡ್ಡ ವ್ಯಕ್ತಿ ಆಗ್ಬೇಕು, ನನ್ನ ತಾಯಿಯನ್ನ ಸಾಕಬೇಕು… ನಮ್ ಶಾಲೆ ಖಾಲಿ ಮಾಡ್ಸಿದ್ರೆ ನಮ್​ ಟೀಚರ್​ ರೋಡಲ್ಲಿ ಕೂರ್ಸಿ ಪಾಠ ಮಾಡ್ಬೇಕಾ? ನಮ್ಗೆ ಯಾರ್ಗೂ ಶಾಲೆ ಬಿಟ್​ ಕೊಡಾಕ ಮನಸ್ಸಿಲ್ರಿ…’ ಎಂದು ಗೋಳಾಡುತ್ತಿದ್ದ ಹುಬ್ಬಳ್ಳಿಯ ‘ಹರಿಜನ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಮಕ್ಕಳ ಕಣ್ಣೀರಿಗೆ ಕಿಚ್ಚ ಸುದೀಪ್​ ಮನ ಮಿಡಿದಿದೆ.

    ಹುಬ್ಬಳ್ಳಿಯ ರಾಮನಗರದಲ್ಲಿರುವ ‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಜಾಗ ತಮ್ಮದೆಂದು ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಕೋರ್ಟ್​ನಿಂದ ಆದೇಶ ತಂದ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆ ಪೊಲೀಸರ ಸಮೇತ ಆಗಮಿಸಿದ್ದ ಸೊಸೈಟಿ ಸಿಬ್ಬಂದಿ, ಶಾಲೆ ಖಾಲಿ ಮಾಡುವಂತೆ ಪಟ್ಟು ಹಿಡಿದು ಶಾಲೆ ಮಕ್ಕಳು ಮತ್ತು ಪೀಠೋಪಕರಣವನ್ನು ಹೊರ ಹಾಕಿದ್ದರು. ಈ ವೇಳೆ ನಾವು ಶಾಲೆಯನ್ನ ಬಿಟ್ಟುಕೊಡಲ್ಲ ಎಂದು ಮಕ್ಕಳು ಕೈ ಮುಗಿದು ಕಣ್ಣೀರಿಟ್ಟಿದ್ದರು. ಕಣ್ಣೀರಿಡುತ್ತ ಬಾಯಿ ಬಡಿದುಕೊಂಡಿದ್ದ ಮಕ್ಕಳು. ಬಳಿಕ ಶಿಕ್ಷಕರು ರಸ್ತೆ ಬದಿಯಲ್ಲೇ ಮಕ್ಕಳಿಗೆ ಪಾಠ ಪ್ರವಚನ ನಡೆಸುತ್ತಿದ್ದರು. ಇದೆಲ್ಲವನ್ನೂ ‘ದಿಗ್ವಿಜಯ ನ್ಯೂಸ್’ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ತಕ್ಷಣ ‘ದಿಗ್ವಿಜಯ’ ನ್ಯೂಸ್ ಚಾನಲ್​ನ ಪ್ರತಿನಿಧಿಗೆ ಕರೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ಶಾಲೆಯ ಬಗ್ಗೆ ಮಾಹಿತಿ ಪಡೆದರು. ಈ ಶಾಲೆಯ ಮಕ್ಕಳಿಗೆ ನೆರವು ನೀಡ್ತೀನಿ. ಬೇರೆ ಕಟ್ಟಡದ ವ್ಯವಸ್ಥೆ ಮಾಡುವುದಾಗಿ ಭರಸವೆ ನೀಡಿದ್ದಾರೆ. ಆ ಮೂಲಕ ಮಕ್ಕಳ ಸಂಕಷ್ಟಕ್ಕೆ ಸುದೀಪ್​ ಸ್ಪಂದಿಸಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

    ದಿಗ್ವಿಜಯ 24*7 ಸುದ್ದಿ ವಾಹಿನಿಯ ಜತೆ ಮಾತನಾಡಿದ ಶಾಲೆಯ ವಿದ್ಯಾರ್ಥಿ ಸಂಜನಾ, ಸುದೀಪ್​ ಸರ್​ಗೆ ತುಂಬಾ ತುಂಬಾ ಥ್ಯಾಂಕ್ಸ್​. ನಾವು ಶಾಲೆ ಇಲ್ಲದೆ ಬೀದಿಯಲ್ಲಿ ಪಾಠ ಕೇಳುತ್ತಿದ್ದೆವು. ನಮ್ಮ ಕಷ್ಟ ನಿವಾರಿಸುವುದಾಗಿ ಹೇಳಿದ ಸುದೀಪ್​ ಸರ್ ಸಹಾಯವನ್ನ ನಾವು ಮರೆಯಲ್ಲ ಎನ್ನುತ್ತಲೇ ಭಾವುಕರಾದರು. ಶಾಲೆ ಮುಖ್ಯಶಿಕ್ಷಕ ಸುದೀಪ್​ ಸರ್​ ಅವರು ನಮ್ಮ ಪಾಲಿನ ದೇವರು. ದಿಗ್ವಿಜಯ ಚಾನಲ್​ನವರೂ ನಮ್ಮೊಂದಿಗಿದ್ದಾರೆ. ಧನ್ಯವಾದಗಳು ಎಂದರು.

    ಮಾ.10ರಂದು ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಆವರಣದ ಬಳಿ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು. ಈ ವರ್ಷದ ಶೈಕ್ಷಣಿಕ ಚಟುವಟಿಕೆ ಮುಗಿಯುವವರೆಗೂ ಅವಕಾಶ ಕೊಡಿ ಎಂದು ಶಿಕ್ಷಕರು ಕೇಳಿಕೊಂಡರೂ ಶಾಲೆಯಲ್ಲಿನ ಸಾಮಗ್ರಿ ಹೊರ ಹಾಕಲಾಗಿತ್ತು. ಅಂದಿನಿಂದ ಬಯಲಲ್ಲೇ ಮಕ್ಕಳಿಗೆ ಪಾಠ ನಡೆಯುತ್ತಿತ್ತು. ಇದೀಗ ಕಿಚ್ಚ ಆ ಒಂದು ಮಾತು ಮಕ್ಕಳ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿದೆ.

    ‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಬಳಿ ಬಿಗುವಿನ ವಾತಾವರಣ: ವಿದ್ಯಾರ್ಥಿಗಳ ಗೋಳಾಟ

    ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

    ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts