More

    ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳುವ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿ; ಡಾ. ಪ್ರವೀಣ

    ರಾಣೆಬೆನ್ನೂರ: ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳುವ ಜತೆಗೆ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಖನ್ನೂರ ವಿದ್ಯಾನಿಕೇತನ ಶಾಲೆಯ ಚೇರ್ಮನ್ ಡಾ. ಪ್ರವೀಣ ಖನ್ನೂರ ಹೇಳಿದರು.
    ನಗರದ ಖನ್ನೂರ ವಿದ್ಯಾನಿಕೇತನ ಸ್ಕೂಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ವಾರ್ಷಿಕೋತ್ಸವದ ನಿಮಿತ್ತ ಶಾಲಾ ಆವರಣದಲ್ಲಿ ಚಪ್ಪರ, ಬಾವಿ, ಚಕ್ಕಡಿ, ಬೀಸುವ ಕಲ್ಲು, ಒನಕೆ, ಕುಡುಗೋಲು, ಒಲೆ ಸೇರಿ ಗ್ರಾಮೀಣ ಸೊಗಡಿನ ವಸ್ತುಗಳ ಪ್ರದರ್ಶನ ನಡೆಯಿತು.
    ಪ್ರಾಚಾರ್ಯೆ ಸಮಿರಾ ಫರ್ನಾಂಡಿಸ್ ಶಾಲಾ ವಾರ್ಷಿಕ ವರದಿ ಓದಿದರು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
    ಸಂಸ್ಥೆಯ ಅಧ್ಯಕ್ಷ ಎಂ.ಎಂ. ಖನ್ನೂರ, ಉಪಾಧ್ಯಕ್ಷೆ ಸುಲೋಚನಾ ಖನ್ನೂರ, ಸಿಇಒ ಡಾ. ಶೈಲಶ್ರೀ ಖನ್ನೂರ, ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಪಿಯು ಕಾಲೇಜ್‌ನ ಪ್ರಾಚಾರ್ಯ ಕಟಕಮ್ ಸುಬ್ಬರಾವ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ದೀಪಾ ಬಣಕಾರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts