More

    ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಣ ಬಳಸಲು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಸಲಹೆ

    ಕಾನಹೊಸಹಳ್ಳಿ: ಬ್ಯಾಂಕ್ ನೀಡುವ ಪರಿಹಾರದ ಮೊತ್ತವನ್ನು ದುರುಪಯೋಗ ಮಾಡದೆ ಮಕ್ಕಳಿಗೆ ಅಗತ್ಯವಾದ ಶಿಕ್ಷಣ ಕೊಡಿಸಲು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಎಂದು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ತಿಳಿಸಿದರು. ಇತ್ತೀಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟ ಗ್ರಾಹಕರ ಸೇವಾ ಕೇಂದ್ರದ ಪ್ರತಿನಿಧಿ ಜಯರಾಂ ನಾಯ್ಕ ಕುಟುಂಬಕ್ಕೆ ಸಮೀಪದ ಚಿಕ್ಕಜೋಗಿಹಳ್ಳಿ ಎಸ್‌ಬಿಐ ಬ್ಯಾಂಕ್ ಅವರಣದಲ್ಲಿ ಮಂಗಳವಾರ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.

    ಕರೊನಾ 2ಅಲೆಯು ತೀವ್ರ ಪರಿಣಾಮ ಬೀರಿದ ಕಾರಣ ಬಹುತೇಕ ಕುಟುಂಬಗಳ ಮುಖ್ಯಸ್ಥರನ್ನು ಕಳೆದುಕೊಂಡವು. ಇಂದು ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನ ಸಿಎಸ್‌ಪಿ ಪ್ರತಿನಿಧಿ ಅಗಿ ಸೇವಾ ಸಲ್ಲಿಸಿದ ವೇಳೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಎಂದರು.

    ಎಸ್‌ಬಿಐ ಬ್ಯಾಂಕ್ ಬಳ್ಳಾರಿ ವಿಭಾಗೀಯ ವ್ಯವಸ್ಥಾಪಕ ಲಕ್ಷ್ಮಣ ಸಿಂಹ ಮಾತನಾಡಿ, ದೇಶದಲ್ಲಿ 45ಕೋಟಿ ಜನರು ಬ್ಯಾಂಕ್ ಗ್ರಾಹಕರಿದ್ದಾರೆ. ಬಳ್ಳಾರಿ ವಿಭಾಗದಲ್ಲಿ 40 ಬ್ಯಾಂಕ್‌ಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಪ್ರತಿ ಬ್ಯಾಂಕ್ ವ್ಯಾಪ್ತಿಯಲ್ಲಿ ಗ್ರಾಹಕ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ. ಚಿಕ್ಕಜೋಗಿಹಳ್ಳಿ ಬ್ಯಾಂಕ್‌ನ ಸಿಎಸ್‌ಪಿ ಪ್ರತಿನಿಧಿಯಾಗಿದ್ದ ಜಯರಾಂ ನಾಯ್ಕ ಕರೊನಾದಿಂದ ಮೃತಪಟ್ಟಿದ್ದರು. ಹೀಗಾಗಿ ಕುಟುಂಬಕ್ಕೆ ಬ್ಯಾಂಕ್‌ನಿಂದ 10ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ ಎಂದರು.

    ಎಸ್‌ಬಿಐ ಬ್ಯಾಂಕ್ ಬಳ್ಳಾರಿ ಜಿಲ್ಲಾ ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ, ಸಿಎಸ್‌ಪಿ ಸೇವಾ ಕೇಂದ್ರದ ರಾಜ್ಯ ಮುಖ್ಯಸ್ಥ ಶಿವಾಶೀಷ್ ಚಟ್ಟೋಪಾಧ್ಯಾಯ, ದೃವನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts