More

    ಅಮೆರಿಕದಲ್ಲಿ ಭಾರತದ ರಾಯಭಾರಿಗೆ ಮುತ್ತಿಗೆ ಹಾಕಿದ ಖಲಿಸ್ತಾನ್​ ಬೆಂಬಲಿಗರು – ನಿಜ್ಜರ್ ಹತ್ಯೆಗೆ ಹೊಣೆ ಹೊರಲು ಆಗ್ರಹ

    ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್‌ನ ಹಿಕ್ಸ್‌ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡಿದ್ದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ಖಲಿಸ್ತಾನಿ ಬೆಂಬಲಿಗರು ತಡೆದು ಖಲಿಸ್ತಾನ್​ ಉಗ್ರರಾದ ನಿಜ್ಜರ್ ಮತ್ತು ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತ ಹೊಣೆ ಹೊರಬೇಕೆಂದು ಆಗ್ರಹಿಸಿದರು.

    ಇದನ್ನೂ ಓದಿ: ನಟಿ ಆಲಿಯಾ ಭಟ್ ಡೀಪ್‌ಫೇಕ್ ವೀಡಿಯೋ ವೈರಲ್!
    ಕೆನಡಾದಲ್ಲಿ ನೆಲೆಸಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ. ಇದಕ್ಕೆ ನೀವೂ ಸಹ ಕಾರಣವೆಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವಾಗ ಅಲ್ಲಿಗೆ ಬಂದ ಖಲಿಸ್ತಾನ್​ ಬೆಂಬಲಿಗರು ಆರೋಪಿಸಿದ್ದಾರೆ. ಈ ಸಂದರ್ಭ ತಳ್ಳಾಟ ನಡೆದಿದ್ದು, ತರಂಜಿತ್ ಹಲ್ಲೆಗೊಳಗಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೋ ತಿಳಿಸಿದೆ.

    ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಖಲಿಸ್ತಾನ್​ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಗುರುಪತ್‌ವಂತ್ ಸಿಂಗ್ ಪನ್ನುನ್‌ ಹತ್ಯೆಗೆ ಭಾರತದ ಗುಪ್ತಚರ ಏಜನ್ಸಿಗಳು ಕಾರಣವೆಂದು ಆರೋಪಿಸುತ್ತಿರುವುದು, ರಾಯಭಾರಿ ಸಂಧು ಅವರನ್ನು ಹಲವರು ತಡೆದು ಪ್ರಶ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

    “ನಿಜ್ಜರ್ ಹತ್ಯೆಗೆ ನೀವೇ ಕಾರಣ. ನೀವು ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದೀರಿ” ಎಂದು ಗುಂಪು ಕಿರುಚಾಡಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನೀನೇ ಹೊಣೆ. ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯ” ಎಂದು ಪಂಜಾಬಿ ಭಾಷೆಯಲ್ಲಿ ಪ್ರತಿಭಟನಾಕಾರರು ಕೂಗುತ್ತಿರುವುದು ಕೇಳಿಬರುತ್ತಿದೆ.
    ವೀಡಿಯೊದಲ್ಲಿ ಇತರರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನಾಕಾರರು ಸಂಧು ಅವರನ್ನು ಹಿಂಬಾಲಿಸುತ್ತ, “ನೀವು ಏಕೆ ಉತ್ತರಿಸುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.

    ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹ ಅಭಿಯಾನದ ಭಾಗವಾಗಿ ರಾಯಭಾರಿ ಅವರನ್ನು ಆಧಾರರಹಿತ ಪ್ರಶ್ನೆಗಳೊಂದಿಗೆ ಕೆಣಕಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ‘X'(ಎಕ್ಸ್‌)ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಬರೆದಿದ್ದಾರೆ.
    ಜನಾಭಿಪ್ರಾಯ ಸಂಗ್ರಹದ ನಾಯಕತ್ವ ವಹಿಸಿದ್ದ ಸರ್ರೆ ಗುರುದ್ವಾರದ ಅಧ್ಯಕ್ಷ ಹಿಮ್ಮತ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ ಎಂದು ಸಿಂಗ್ ಹೇಳಿದ್ದಾರೆ.

    ಬಾಲಿವುಡ್​ ತಾರೆಗಳ ಜತೆ ಕಾಣಿಸಿಕೊಳ್ಳುವ ಓರ್ರಿ ಯಾರು? ಸಾರಾ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts