More

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ “ಕೆಜಿಎಫ್​​’ ಚಿತ್ರದ ಹೊಸ ಟ್ಯೂನ್​ ಬಿಡುಗಡೆ; ಹಾಗಾದರೆ ನೀವಿನ್ನೂ ಕೇಳಿಲ್ವಾ?’

    ಬೆಂಗಳೂರು: ಲಾಕ್​ಡೌನ್​ ಆಗಿದೆ. ಸಿನಿಮಾ ತಂಡಗಳಿಂದಲೂ ಅಭಿಮಾನಿಗಳಿಗೆ ಯಾವುದೇ ಸಿಹಿ ಸುದ್ದಿ ಇಲ್ಲ. ಹೀಗಿರುವಾಗಲೇ “ಕೆಜಿಎಫ್​​’ ಟೀಮ್​ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಂದಿದೆ. ಮೊನ್ನೆಯಷ್ಟೇ ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿದ್ದ “ಕೆಜಿಎಫ್​’ ಬಳಗ ಈಗ ಟ್ಯೂನ್​ ಮೂಲಕ ಆಗಮಿಸಿದೆ. ಹೌದು, ಪ್ರಶಾಂತ್​ ನೀಲ್​ ನಿರ್ದೇಶನದ “ಕೆಜಿಎಫ್; ಚಾಪ್ಟರ್​ 1′ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲು. ಆ ಸಿನಿಮಾ ಸೃಷ್ಟಿಸಿದ ಚರಿತ್ರೆ ಒಂದೊದಲ್ಲ. ಮೇಕಿಂಗ್​, ಸ್ಟೋರಿ, ಅದರಲ್ಲೂ ಹಿನ್ನೆಲೆ ಸಂಗೀತದಿಂದಲೂ ಪ್ರೇಕ್ಷಕನಿಗೆ ತುಂಬ ಹತ್ತಿರವಾಗಿತ್ತು. ಇದೀಗ ಲಾಕ್​ಡೌನ್​ ನಿಮಿತ್ತ ರಾಕಿ ಹುಟ್ಟಿದ ಗಳಿಗೆಯ ಟ್ಯೂನ್​ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್​ ನೀಲ್​. ಟ್ಯೂನ್​ ಕೇಳುತ್ತಿದ್ದಂತೆ ಇದು ಚಾಪ್ಟರ್​ 2ನೇ ಭಾಗದ್ದಾ ಎಂಬ ಪ್ರಶ್ನೆ ಮೂಡಬಹುದು. ಆದರೆ ಆ ನಿಮ್ಮ ಊಹೆ ತಪ್ಪು. ಏಕೆಂದರೆ ಸದ್ಯ ಬಿಡುಗಡೆ ಆಗಿರುವ ಟ್ಯೂನ್​ ಮೊದಲನೇ ಭಾಗದ್ದು.
    ಮೊದಲ ಭಾಗದ ಸಿನಿಮಾಕ್ಕಾಗಿ ನೂರಾರು ಟ್ಯೂನ್​ಗಳನ್ನು ಸಂಗೀತ ನಿರ್ದೇಶಕ ರವಿ ಬಸ್ರೂರು ಕಂಪೋಸ್​ ಮಾಡಿದ್ದರು. ಅದರಲ್ಲಿ ರಾಕಿ ಹುಟ್ಟಿದ ಗಳಿಗೆಯ ಟ್ಯೂನ್​ ಸಿನಿಮಾದಲ್ಲಿ ಬಳಸಿರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಒಂದು ಸಣ್ಣ ಚೇಂಜ್​ ಇರಲಿ ಎಂಬ ಕಾರಣಕ್ಕೆ ಬಿಡುಗಡೆ ಮಾಡಿದ್ದಾರೆ ಪ್ರಶಾಂತ್​.
    ಅಂದಹಾಗೆ, ಬಹುತೇಕ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿರುವ “ಕೆಜಿಎಫ್; ಚಾಪ್ಟರ್​ 2′ ಅಕ್ಟೋಬರ್​ 23ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ, ಕರೊನಾ ಲಾಕ್​ಡೌನ್​ನಿಂದ ಒಂದಷ್ಟು ಕಾಲ ಮುಂದೂಡಿಕೆಯಾದರೂ ಅಚ್ಚರಿಪಡಬೇಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts