More

    ಕೆಜಿಎಫ್ ಸಂಗೀತ ನಿರ್ದೇಶಕನ ಸದ್ಯದ ದುಡಿಮೆ ಎಷ್ಟು ಗೊತ್ತೆ?: ಕಿಬೋರ್ಡ್ ಹಿಡಿಯುತ್ತಿದ್ದ ರವಿ ಬಸ್ರೂರು ಅದನ್ಯಾಕೆ ಹಿಡಿದ್ರು..!

    ಬೆಂಗಳೂರು: ಸಂಗೀತದ ಮೂಲಕವೇ ಮಂತ್ರಮುಗ್ಧರನ್ನಾಗಿಸುವ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು, ಸದ್ಯ ಸಂಗೀತಕ್ಕೆ ಬೈ ಬೈ ಹೇಳಿದ್ದಾರೆ! ಸಂಗೀತ ಕ್ಷೇತ್ರ ಬಿಟ್ಟು 35 ರೂಪಾಯಿ ಕೂಲಿ ಕೆಲಸಕ್ಕೆ ಕೈ ಜೋಡಿಸಿದ್ದಾರೆ! ಇದಕ್ಕೆ ಕರೊನಾ ಕಾರಣನಾ? ಹೌದು, ವ್ಯಾಪಕವಾಗಿ ಹರಡುತ್ತಿರುವ ಕರೊನಾದಿಂದಾಗಿ ಇಡೀ ಸಿನಿಮಾರಂಗ ಸ್ಥಗಿತಗೊಂಡಿದೆ. ಎಷ್ಟೋ ಸಿನಿಮಾ ಮಂದಿ ಮನೆಯಲ್ಲಿ ಕಾಲ ಕಳೆದರೆ, ಇನ್ನು ಕೆಲವರು ಅವರವರ ಊರಲ್ಲಿ ಕುಟುಂಬದೊಂದಿಗೆ ‘ಕರೊನಾ’ ದಿನಗಳನ್ನು ದೂಡುತ್ತಿದ್ದಾರೆ.

    ಹೀಗಿರುವಾಗ ಕುಂದಾಪುರ ಬಳಿಯ ಬಸ್ರೂರಿನಲ್ಲಿ ರವಿ ಬಸ್ರೂರು ಕೈಯಲ್ಲಿ ಸುತ್ತಿಗೆ ಹಿಡಿದು, ಕಮ್ಮಾರಿಕೆ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗಂತ ಅದನ್ನೇ ಅವರು ಪೂರ್ಣ ಪ್ರಮಾಣದಲ್ಲಿ ಮುಂದುವರಿಸಿದ್ದಾರೆ ಎಂದುಕೊಳ್ಳುವಂತಿಲ್ಲ. ಏಕೆಂದರೆ, ಕಮ್ಮಾರಿಕೆ ಅವರ ಕುಲಕಸುಬು. ಹಾಗಾಗಿ ತಂದೆ ಕೆಲಸದಲ್ಲಿ ರವಿ ನೆರವಾಗಿದ್ದಾರೆ. ಕಿಬೋರ್ಡ್ ಬದಿಗಿಟ್ಟು, ಸುತ್ತಿಗೆ ಹಿಡಿದು ಒಂದಷ್ಟು ಹೊತ್ತು ಕಮ್ಮಾರಿಕೆ ಕೆಲಸ ಮಾಡಿ, 35 ರೂಪಾಯಿ ಸಂಪಾದನೆ ಮಾಡಿದ್ದಾರೆ.

    ಬೆಂಕಿಯ ಮುಂದೆ ಕುಳಿತು ಕಾದ ಹಾರೆ ಬಡೆಯುವ ಫೋಟೋ ಮತ್ತು ವಿಡಿಯೋ ತುಣುಕನ್ನು ಹಂಚಿಕೊಂಡು, ‘ಇವತ್ 35 ರೂಪಾಯಿ ದುಡಿಮೆ. ತಲೆಬಿಸಿ ಕಮ್ಮಿ ಆಯ್ತ. ಅಪ್ಪಯ್ಯಂಗೆ ಜೈ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2’ ಸಿನಿಮಾ ಸಂಗೀತ ನಿರ್ದೇಶನದ ಕೆಲಸದಲ್ಲಿ ರವಿ ಬಸ್ರೂರು ತೊಡಗಿಸಿಕೊಂಡಿದ್ದಾರೆ.

    ನಿಮ್ಮಿಂದ ದೇಶವೇ ಬಲಿಯಾಗುವಂತೆ ಮಾಡದಿರಿ, ನಾಗರಿಕರಂತೆ ವರ್ತಿಸಿ ಎಂದು ನಟ ದರ್ಶನ್​ ಹೇಳಿದ್ಯಾಕೆ?

    ಅಪ್ಪಯ್ಯಂಗೆ ಜೈ

    ಇವತ್ 35ರೂಪಾಯ್ ದುಡಿಮೆ🤩📢ತಲಿಬಿಸಿ ಫುಲ್ ಕಮ್ಮಿ ಆಯ್ತ್

    Ravi Basrur ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮಾರ್ಚ್ 23, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts