More

    ಕೆಜಿಎಫ್-2​ ಸಿನಿಮಾ ಅಡ್ಡದಿಂದ ಬಂತು ಬ್ರೇಕಿಂಗ್​ ನ್ಯೂಸ್​: ಬಿಡುಗಡೆ ದಿನಾಂಕ ಘೋಷಿಸಿದ ರಾಕಿ ಭಾಯ್​!

    ಬೆಂಗಳೂರು: ಕೆ.ಜಿ.ಎಫ್ ಚಾಪ್ಟರ್​ 2​ ಸಿನಿಮಾ ಅಡ್ಡದಿಂದ ಯಶ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಶೂಟಿಂಗ್​ ಕಂಪ್ಲೀಟ್​ ಆಗಿದ್ದು ಬಿಡುಗಡೆ ಯಾವಾಗ ಎಂಬ ಸಿನಿರಸಿಕರ ಪ್ರಶ್ನೆಗೆ ರಾಕಿಂಗ್​ ಸ್ಟಾರ್​ ಯಶ್​ ಉತ್ತರ ನೀಡಿದ್ದಾರೆ.

    ಮೋಷನ್​ ಪೋಸ್ಟರ್​ ವಿಡಿಯೋ ಟ್ವೀಟ್​ ಮಾಡುವ ಮೂಲಕ ಚಿತ್ರ ಬಿಡುಗಡೆಯ ದಿನಾಂಕವನ್ನು ಯಶ್​ ಘೋಷಿಸಿದ್ದಾರೆ. ಎಲ್ಲರ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿರುವ ಯಶ್​, ಅಕ್ಟೋಬರ್​ 23ರಂದು ನಾವು ನಿಮ್ಮ ಮುಂದೆ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಕೆ.ಜಿ.ಎಫ್​ ಚಾಪ್ಟರ್​ 1 ಸಿನಿಮಾ ಪ್ಯಾನ್​ ಇಂಡಿಯಾ ಬಿಡುಗಡೆಯಾಗಿತ್ತು. ಒಳ್ಳೆಯ ಹವಾದೊಂದಿಗೆ ನೂರಾರು ಕೋಟಿ ರೂ. ಅನ್ನು ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಎಲ್ಲ ಚಿತ್ರರಂಗದ ಸಿನಿರಸಿಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇದೀಗ ಚಾಪ್ಟರ್​ 2ಗೆ ಎಲ್ಲರು ಎದುರು ನೋಡುತ್ತಿದ್ದು, ಅವರ ಕುತೂಹಲಕ್ಕೆ ಉತ್ತರ ದೊರಕಿದೆ.

    ಕೆ.ಜಿ.ಎಫ್​ ಚಾಪ್ಟರ್​​ 2ನಲ್ಲಿ ವಿಲನ್​ ಪಾತ್ರದಲ್ಲಿ ಬಾಲಿವುಡ್​ ದಿಗ್ಗಜ ನಟ ಸಂಜಯ್​ ದತ್ತ ಅವರು ಕಾಣಿಸಿಕೊಂಡಿರುವುದು ಚಿತ್ರದ ಮೇಲೆ ಮತ್ತು ನಿರೀಕ್ಷೆ ಗರಿಗೆದರಿದೆ. ಅಲ್ಲದೆ, ಬಾಲಿವುಡ್​ ನಟಿ ರವೀನಾ ಟಂಡನ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಚಿತ್ರದಲ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಅದನ್ನು ತಲುಪಲಿದೆಯೇ ಎಂಬುದನ್ನು ತಿಳಿಯಬೇಕಾದರೆ ಅ. 23ರವರೆಗೆ ಕಾಯಲೇಬೇಕಿದೆ.

    ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಕುರಿತು​ ಅಭಿಮಾನಿಗಳಿಗೆ ಬ್ರೇಕಿಂಗ್​ ನ್ಯೂಸ್ ಕೊಟ್ಟ ದರ್ಶನ್​!​

    PHOTOS| ಜಾದೂಗಾರ ಆಕರ್ಷ್​ ಜತೆ ರಾಧಿಕಾ ಕಲ್ಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts