More

    ‘ಕೆಜಿಎಫ್​ ಚಾಪ್ಟರ್ 2’ ಬಿಡುಗಡೆ ದಿನಾಂಕ ಲೀಕ್ ಆಯ್ತಾ?; ಈ ದಿನದಂದು ಬರ್ತಿದ್ದಾನೆ ರಾಕಿಭಾಯ್!

    ಬೆಂಗಳೂರು: ಯಶ್​ ಬರ್ತ್​ಡೇ ಪ್ರಯುಕ್ತ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಯೂಟ್ಯೂಬ್​ನಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಕೇವಲ ಭಾರತವಷ್ಟೇ ಅಲ್ಲ ಹೊರ ದೇಶಗಳಲ್ಲಿಯೂ ಸಿನಿಮಾ ಕ್ರೇಜ್​ ಶುರುವಾಗಿದೆ. ಸಿನಿಮಾ ಬಿಡುಗಡೆ ಯಾವಾಗ ಎಂದು ಅಭಿಮಾನಿ ವಲಯದಲ್ಲಿಯೂ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಇದೇ ಸಿನಿಮಾ ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ಕೇಳಿಬರುತ್ತಿದೆ.

    ಇದನ್ನೂ ಓದಿ: ನಟ ಸುಶಾಂತ್​ ಸಿಂಗ್ ರಜಪೂತ್​​ರನ್ನು ಹಾಡಿ ಹೊಗಳಿದ ಬಾಂಬೆ ಹೈಕೋರ್ಟ್​

    ಹೌದು, ಒಂದಷ್ಟು ಮೂಲಗಳ ಪ್ರಕಾರ ಜುಲೈ 30ಕ್ಕೆ ವಿಶ್ವದಾದ್ಯಂತ ಕೆಜಿಎಫ್​ ಚಾಪ್ಟರ್ 2 ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನಷ್ಟೇ ಚಿತ್ರತಂಡ ಅಧಿಕೃತ ಮಾಡಬೇಕಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ಬರುವ ಬಗ್ಗೆ ಹೇಳಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್ 23ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಈಡೇರಲಿಲ್ಲ. ಇದೀಗ ಜು. 30ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: 230 ಕೋಟಿ ರೂಪಾಯಿಗೆ ಮಾರಾಟವಾದ ರಾಧೆ

    ಇನ್ನು ಟೀಸರ್ ಬಗ್ಗೆ ಈಗಾಗಲೇ ಚಿತ್ರತಂಡವೇ ಹೇಳಿಕೊಂಡಂತೆ 4 ಕೋಟಿ (40 ಮಿಲಿಯನ್) ಮಂದಿ ಕೆಜಿಎಫ್​ ಟೀಸರ್ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಸರ್​ ಮೆಚ್ಚಿಕೊಂಡವರ ಸಂಖ್ಯೆಯೂ ಮಿಲಿಯನ್​ ಲೆಕ್ಕದಲ್ಲಿಯೇ ಇದೆ ಎಂದರೆ ನೀವು ನಂಬಲೇಬೇಕು. ಹೌದು ಬರೋಬ್ಬರಿ 3 ಮಿಲಿಯನ್ ಮಂದಿ ಟೀಸರ್​ಗೆ ಲೈಕ್​ ಒತ್ತಿದ್ದಾರೆ.

    ‘ಕೆಜಿಎಫ್​ ಚಾಪ್ಟರ್ 2’ ಟೀಸರ್ ನೋಡಿ ಹೃತಿಕ್ ರೋಷನ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts