More

    ಅಮೆರಿಕಾದಲ್ಲೂ ಕೆಜಿಎಫ್-2 ಹವಾ; ಹಾಲಿವುಡ್ ಸಿನಿಮಾ ಮೀರಿಸುತ್ತೆ ಎಂದ ಅಭಿಮಾನಿಗಳು!

    ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಕೆಜಿಎಫ್​ ಚಾಪ್ಟರ್​ 2 ಚಿತ್ರ ಅತಿದೊಡ್ಡ ಆ್ಯಕ್ಷನ್ ಎಂಟರ್‌ಟೈನರ್ ಆಗಿದೆ. ‘ಕೆಜಿಎಫ್2’ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಮುಂದುವರಿದ ಭಾಗವಾಗಿದೆ. ಭಾರಿ ನಿರೀಕ್ಷೆಯ ನಡುವೆ ಇಂದು ವಿಶ್ವದಾದ್ಯಂತ 11 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಭಾರಿ ಪ್ರಮಾಣದಲ್ಲಿ ಟಿಕೆಟ್ ಬುಕ್ ಮಾಡಲಾಗಿತ್ತು. ಈ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್‌ಗಳಿಗೆ ಮುಗಿಬಿದ್ದಿದ್ದಾರೆ.

    ಅಮೆರಿಕಾದಲ್ಲೂ ಕೆಜಿಎಫ್-2 ಹವಾ; ಹಾಲಿವುಡ್ ಸಿನಿಮಾ ಮೀರಿಸುತ್ತೆ ಎಂದ ಅಭಿಮಾನಿಗಳು!

    ರಾಜ್ಯ-ಹೊರ ರಾಜ್ಯ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಕೆಜಿಎಫ್ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾ ನೋಡಿದ ಅಮೆರಿಕಾದಲ್ಲಿರುವ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದೀಗ ತಾನೆ ಅಮೆರಿಕದ ನ್ಯೂಯಾರ್ಕ್ ರಾಜ್ಯದ ಆಲ್ಬನಿಯಲ್ಲಿ ಕೆಜಿಎಫ್​​-2 ಸಿನಿಮಾ ನೋಡಿ ತುಂಬಾ ಖುಷಿಯಾಯಿತು. ನಮ್ಮ ಕನ್ನಡ ಚಲನಚಿತ್ರ ಹಾಲಿವುಡ್ ಸಿನಿಮಾವನ್ನು ಮೀರಿಸುವಂತೆ ಭರ್ಜರಿಯಾಗಿ ಬಂದಿರುವುದು ನಮ್ಮಲ್ಲಿ ಅತೀವ ಹೆಮ್ಮೆ ಮತ್ತು ರೋಮಾಂಚನವನ್ನು ತರಿಸುತ್ತದೆ ಎಂದು ಅಭಿಮಾನಿ ಬೆಂಕಿ ಬಸಣ್ಣ ತಿಳಿಸಿದ್ದಾರೆ.

    ರಾಜೀನಾಮೆ ನೀಡುವ ಮುನ್ನ ಸಿಎಂಗೆ ಕರೆ ಮಾಡಿದ್ದ ಈಶ್ವರಪ್ಪ; ಹೊರಬಿತ್ತು ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts