More

    ಸರದಿಯಲ್ಲಿ ಬಿತ್ತನೆ ಬೀಜ ಪಡೆಯಿರಿ

    ಕೆರೂರ: ಮಾಸ್ಕ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತುಕೊಂಡರೆ ಪ್ರತಿಯೊಬ್ಬರಿಗೂ ಬಿತ್ತನೆ ಬೀಜ ದೊರೆಯುವುದು ಎಂದು ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಹೇಳಿದರು.

    ಪಟ್ಟಣದಲ್ಲಿ ನಿರ್ಮಾಣಗೊಂಡು ಶಾಸಕ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಳ್ಳಲಿರುವ ನೂತನ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಪರಿಶೀಲನೆಗೆ ಬುಧವಾರ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದ ಅವರು ರೈತರಿಗೆ ಸಲಹೆ-ಸೂಚನೆ ನೀಡಿದರು.

    ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಲು ಹರಸಾಹಸ ಪಡುತ್ತಿದ್ದ ರೈತರು, ಕೇಂದ್ರದಲ್ಲಿ ಬೀಜ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಹಾಗೂ ಸರದಿ ಬಂದಾಗ ಸರ್ವರ್ ಬಿಜಿ ಇದೆ ಎಂದು ಅಲ್ಲಿನ ಅಧಿಕಾರಿಗಳನ್ನು ನಮ್ಮನ್ನು ಮರಳಿ ಕಳಿಸುತ್ತಾರೆ. ಇದರಿಂದ ಹಿಂಗಾರು ಬಿತ್ತನೆಗೆ ವಿಳಂಬವಾದರೆ, ಸರಿಯಾಗಿ ಬೆಳೆ ಬರುವುದಿಲ್ಲ. ನಮಗೆ ಬೀಜ ಕೊಡುವ ವ್ಯವಸ್ಥೆ ಮಾಡಬೇಕೆಂದು ಅಳಲು ತೋಡಿಕೊಂಡಾಗ ಅವರು ರೈತರೊಂದಿಗೆ ಮಾತನಾಡಿದರು.

    ಬೀಜ ವಿತರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಸ್ ಪುಸ್ತಕ ಚೆಕ್ ಆಗಬೇಕು. ನಿಮ್ಮ ಆಧಾರ್ ಸಂಖ್ಯೆ ನಮೂದಿಸಬೇಕು. ಈ ಪ್ರಕ್ರಿಯೆ ರಾಜ್ಯಾದ್ಯಂತ ನಡೆದಿರುವುದರಿಂದ ಸರ್ವರ್ ಬಿಜಿ ಬರುತ್ತದೆ. ಅದಕ್ಕಾಗಿ ರೈತರು ಸಹಕರಿಸಬೇಕು. ಸರದಿಯಲ್ಲಿ ನಿಂತು ಸಮಾಧನದಿಂದ ಬಿತ್ತನೆ ಬೀಜ ಪಡೆಯಬೇಕೆಂದು ಸೂಚಿಸಿದರು. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ 2 ಕೌಂಟರ್‌ಗಳನ್ನು ಮಾಡಲು ಸೂಚಿಸಿದರು.

    ಡೆಪ್ಯೂಟಿ ಡೈರೆಕ್ಟರ್ ಎಸ್.ವಿ. ಕೊಂಗವಾಡ, ತಾಲೂಕು ಕೃಷಿ ಅಧಿಕಾರಿ ಆನಂದ ಗೌಡರ, ಎಒಗಳಾದ ಶಂಕರ ನಾಯಕ, ಆರ್.ಎ. ಸುರಪುರ, ಎ.ಎಸ್. ಮರಿದ್ಯಾವನ್ನವರ, ರೈತರಾದ ರಾಮನಗೌಡ ಕಿತ್ತಲಿ, ದಾನಪ್ಪ ಕಿರಗಿ, ಶೇಖರ ಕಬಾಡದ, ಚಂದ್ರಶೇಖರಯ್ಯ ಹಿರೇಮಠ, ಪರಶುರಾಮ ಹೂಲಗೇರಿ, ಮಲ್ಲು ಮಾಳಗಿ, ರಂಗಪ್ಪ ಹುಣಸಿಕಟ್ಟಿ ಸೇರಿ ಮತ್ತಿತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts