More

    ಕೇರಳಕ್ಕೆ ವಿಶ್ವಸಂಸ್ಥೆ ಪುರಸ್ಕಾರ

    ತಿರುವನಂತಪುರ: ಸಂವಹನೇತರ ಕಾಯಿಲೆಗಳಿಗೆ ಸಂಬಂಧಿಸಿ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೇರಳಕ್ಕೆ ಗುರುವಾರ ವಿಶ್ವಸಂಸ್ಥೆಯ ಪುರಸ್ಕಾರ ಲಭಿಸಿದೆ. ಸಂವಹನೇತರ ಕಾಯಿಲೆಗಳಿಗೆ ಸಂಬಂಧಿಸಿದ ದ ಯುಎನ್​ ಇಂಟರ್​ ಏಜೆನ್ಸಿ ಟಾಸ್ಕ್ ಫೋರ್ಸ್​ ಅವಾರ್ಡ್​ ವಿಜೇತರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್​ ಟೆಡ್ರೋಸ್ ಅಧನೋಮ್​ ಘೆಬ್ರೆಯೇಸಸ್ ಘೋಷಿಸಿದ್ದರು.

    2019ರ ಅವಧಿಯಲ್ಲಿ ಸಂವಹನೇತರ ಕಾಯಿಲೆಗಳ ತಡೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿ ಬಹುಮಾದರಿಯ ಯೋಜನೆಗಳನ್ನು ಜಾರಿಗೊಳಿಸಿದ, ಮಾನಸಿಕ ಆರೋಗ್ಯ ಮತ್ತು ಸಂವಹನೇತರ ಕಾಯಿಲೆಗಳ ಸಂಬಂಧಿತ ವಿಸ್ತೃತ ಸುಸ್ಥಿರ ಅಭಿವೃದ್ಧಿ ಗುರಿ ತಲುಪುವಲ್ಲಿ ಮಾಡಿದ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕೇರಳ ಇದೇ ಮೊದಲ ಬಾರಿಗೆ ಈ ವಾರ್ಷಿಕ ಪ್ರಶಸ್ತಿಗೆ ಭಾಜನವಾಗಿದೆ.

    ಇದನ್ನೂ ಓದಿ: ತನಿಖಾ ಸಂಸ್ಥೆಗಳ ಅವಸ್ಥೆ ! ; ವಿಶೇಷ ಟೀಂಗಳಿಗೆ ನೂರೆಂಟು ಕಷ್ಟ

    ಕೇರಳದ ಆರೋಗ್ಯ ಕ್ಷೇತ್ರದ ಅವಿರತ ಶ್ರಮದ ಸೇವೆಗೆ ಸಂದ ಗೌರವ ಇದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಪ್ರತಿಕ್ರಿಯಿಸಿದ್ದು, ಕೋವಿಡ್​-19 ಸೋಂಕಿನ ನಡುವೆಯೂ ಸಂವಹನೇತರ ಕಾಯಿಲೆಗಳಿಂದ ಆಗಬಹುದಾದ ಮರಣ ಪ್ರಮಾಣ ನಿಯಂತ್ರಿಸುವಲ್ಲಿ ಕೇರಳ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿತ್ತು. ಕೇರಳದ ಎಲ್ಲ ಆರೋಗ್ಯ ಸೇವಾ ಸಿಬ್ಬಂದಿಯ ಕೆಲಸಕ್ಕೆ ಸಂದ ಗೌರವ ಇದು ಎಂದೂ ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts