More

    ಲಾಕ್​ಡೌನ್​ನಲ್ಲಿ ಆಶ್ರಯ ಕೋರಿ ಸ್ನೇಹಿತನ ಮನೆಗೆ ಬಂದ- ಅವನ ಪತ್ನಿಯ ನೋಡಿದ… ಮುಂದೆ ಎಲ್ಲವೂ ಅಲ್ಲೋಲ ಕಲ್ಲೋಲ…

    ಕೊಚ್ಚಿ: ಲಾಕ್​ಡೌನ್​ ಸಮಯದಲ್ಲಿ ಏನೇನೋ ಘಟನೆಗಳು ಸಂಭವಿಸಿಹೋಗಿವೆ. ಕೆಲವರ ಜೀವನದಲ್ಲಿ ಲಾಕ್​ಡೌನ್​ನಿಂದ ಪ್ರಯೋಜನ ಆಗಿದ್ದರೆ, ಯಾರ್ಯಾರದೋ ಜೀವನದಲ್ಲಿ ಏನೇನೋ ಅನಾಹುತಗಳೂ ಆಗಿವೆ, ಎಷ್ಟೋ ಮಂದಿಗೆ ತೀರಾ ಹಳೆಯ ಸ್ನೇಹಿತರು ಸಿಕ್ಕ ಖುಷಿ. ಮಾತನಾಡಿ ಎಷ್ಟೋ ವರ್ಷಗಳಾದ ಮೇಲೆ ಸಿಕ್ಕ ಅಪರೂಪದ ಸ್ನೇಹಿತರನ್ನು ಪುನಃ ಭೇಟಿ ಮಾಡಲು ಲಾಕ್​ಡೌನ್​ ಅವಕಾಶ ಕಲ್ಪಿಸಿರುವುದೂ ನಿಜ.

    ಆದರೆ ಅದೇ ಹಳೆಯ ಸ್ನೇಹಿತನೇ ಕೇರಳದ ಎರ್ನಾಕುಲಂ ನಿವಾಸಿಯೊಬ್ಬನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದೆ! 20 ವರ್ಷದ ಹಳೆಯ ಸ್ನೇಹಿತ ಇವರ ಜೀವನದಲ್ಲಿ ಇನ್ನಿಲ್ಲದ ಅಲ್ಲೋಲ ಕಲ್ಲೋಲ ಸೃಷ್ಟಿಸಿಬಿಟ್ಟಿದ್ದಾನೆ!

    ಇದನ್ನೂ ಓದಿ: ಪಾಕಿಸ್ತಾನಕ್ಕೇ ಕೊಟ್​ ಬಿಟ್ರಲ್ಲ ಉಗುಳಿದ ಪಿಪಿಇ ಕಿಟ್​​! ಪಾನ್​ ಕಲೆ ನೋಡಿ ಬೆಚ್ಚಿಬಿದ್ದ ವೈದ್ಯರು…

    ಆಗಿದ್ದು ಇಷ್ಟೇ. ಇಡುಕ್ಕಿ ಜಿಲ್ಲೆಯ ಮುನ್ನಾರ್ ಮೂಲದ ಖಾಸಗಿ ಉದ್ಯೋಗಿ ಲೋಥಾರಿಯೋ ಲಾಕ್​ಡೌನ್​ ನಿಮಿತ್ತ ಮನೆಯಲ್ಲಿಯೇ ಇದ್ದರು. ಇವರ 20 ವರ್ಷಗಳ ಹಳೆಯ ಸ್ನೇಹಿತನೊಬ್ಬ ಸಮೀಪದ ಮುವಾಟ್ಟುಪುಳ ಪಟ್ಟಣಕ್ಕೆ ಕೆಲಸದ ನಿಮಿತ್ತ ಬಂದಿದ್ದ. ಅದೇ ವೇಳೆ ಲಾಕ್​ಡೌನ್​ ಘೋಷಣೆಯಾಯಿತು.

    ಏನು ಮಾಡಬೇಕು ಎಂದು ತಿಳಿಯದ ಆತನಿಗೆ ತನ್ನ ಹಳೆಯ ಸ್ನೇಹಿತ ಲೋಥಾರಿಯೋ ನೆನಪಾದ. ಅವರಿವರಿಗೆ ಕರೆ ಮಾಡಿ ಅಂತೂ ಲೋಥಾರಿಯೋನ ಮೊಬೈಲ್​ ಸಂಖ್ಯೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ನಂತರ ಅವರಿಗೆ ಕರೆ ಮಾಡಿದ. ಎರಡು ದಶಕಗಳ ಹಿಂದಿನ ಗೆಳೆಯ ಸಿಕ್ಕಿದ್ದು ಕಂಡ ಲೋಥಾರಿಯೋ ಅವರಿಗೆ ತುಂಬಾ ಖುಷಿಯಾಗಿ ಮನೆಗೆ ಕರೆದರು.

    ಇದನ್ನೂ ಓದಿ:  ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!

    ಲಾಕ್​ಡೌನ್​ ಮುಗಿಯುವವರೆಗೆ ಮನೆಯಲ್ಲಿಯೇ ಇರುವಂತೆ ಹೇಳಿ ಊಟ, ವಸತಿ ವ್ಯವಸ್ಥೆ ಮಾಡಿದರು. ಅವರು ಇರುವ ಪ್ರದೇಶ ಗ್ರೀನ್​ ಝೋನ್​ ಎಂದು ಸರ್ಕಾರ ಘೋಷಣೆ ಮಾಡಿದ ನಂತರ, ಇಂಥ ಪ್ರದೇಶಗಳಲ್ಲಿನ ಜನರು ಹೊರಗಡೆ ಹೋಗಲು ಸರ್ಕಾರ ಅನುಮತಿ ನೀಡಿತು.

    ಅದಾಗಲೇ ತಿಂಗಳಾಗಿದ್ದರಿಂದ ಸ್ನೇಹಿತ ತನ್ನ ಮನೆಗೆ ಹೋಗಬಹುದು ಎಂದು ಲೋಥಾರಿಯೋ ಭಾವಿಸಿದರು. ಈ ಬಗ್ಗೆ ಅವರು ಹೇಳಿದರು ಕೂಡ. ಆದರೆ ಅದ್ಯಾಕೋ ಸ್ನೇಹಿತ ಮನೆ ಬಿಟ್ಟು ಹೋಗುವಂತೆ ಕಾಣಿಸಲಿಲ್ಲ. ಅದಾಗಲೇ ಆತನಲ್ಲಿ ಆಗಿದ್ದ ಕೆಲವೊಂದು ಬದಲಾವಣೆಯನ್ನು ಅರಿತಿದ್ದ ಲೋಥಾರಿಯೋ, ಮನೆಗೆ ವಾಪಸಾಗುವಂತೆ ಎಷ್ಟೇ ಹೇಳಿದರೂ ಕೇಳಲಿಲ್ಲ.

    ತನ್ನ ಮೇಲೆ ಸಂದೇಹ ಶುರುವಾಗಿದೆ ಎಂದು ಸ್ನೇಹಿತನಿಗೆ ತಿಳಿಯಿತು. ಅಷ್ಟಕ್ಕೂ ಈ ಸಂದೇಹ ಏನೆಂದರೆ, ಈ ಭೂಪ, ಲೋಥಾರಿಯೋ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಆಕೆಗೂ ಸ್ನೇಹಿತನ ಕಂಡರೆ ಇಷ್ಟವಾಗತೊಡಗಿತು. ಇಬ್ಬರು ಮಕ್ಕಳನ್ನು ಹೊಂದಿದ್ದರೂ ಆಕೆ ಸ್ನೇಹಿತನ ಮೇಲೆ ಹೆಚ್ಚು ಒಲವು ತೋರಲು ಶುರು ಮಾಡಿದಳು. ಹೀಗೆ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಆದರೆ ಲವ್​ ಮ್ಯಾರೇಜ್​ ಆಗಿದ್ದ ಲೋಥಾರಿಯೋಗೆ ತನ್ನ ಹೆಂಡತಿಯ ಮೇಲೆ ಅಪಾರ ನಂಬಿಕೆ.

    ಇದನ್ನೂ ಓದಿ: ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!

    ಅದೊಂದು ದಿನ ಲಾಕ್​ಡೌನ್​ ಸಡಿಲಿಕೆಯಿಂದಾಗಿ ಲೋಥಾರಿಯೋ ಹೊರಗಡೆ ಹೋಗಿದ್ದರು. ಮನೆಗೆ ಬಂದು ನೋಡಿದರೆ ಸ್ನೇಹಿತನೂ ಇರಲಿಲ್ಲ, ಹೆಂಡತಿಯೂ ನಾಪತ್ತೆ. ಮನೆಯಲ್ಲಿ ಮಕ್ಕಳೂ ಇರಲಿಲ್ಲ. ಮೊದಲೇ ಸಂದೇಹ ತಲೆಹೊಕ್ಕಿದ್ದರಿಂದ ಪೊಲೀಸ್​ ಕಂಪ್ಲೇಂಟ್​ ನೀಡಿದ್ದಾರೆ.

    ಹೆಂಡತಿ ಮತ್ತು ಮಕ್ಕಳ ಫೋಟೋ ನೋಡಿದ ಪೊಲೀಸರು ಈ ಹಿಂದೆ ಕೂಡ ಆಕೆ ಒಬ್ಬನ ಜತೆ ಹೊರಗೆ ಹೋಗಿದ್ದು, ನಾವು ತಡೆದಿರುವುದಾಗಿ ಹೇಳಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಓಡಾಟ ಮಾಡದಂತೆ ಆ ಜೋಡಿಗೆ ವಾರ್ನ್​ ಮಾಡಿದ್ದೆವು ಎಂದಿದ್ದಾರೆ. ಇದರರ್ಥ ಈ ಹಿಂದೆ ಕೂಡ ಇವರು ಪರಾರಿಯಾಗುವ ಪ್ರಯತ್ನ ಮಾಡಿದ್ದರು! ಗಂಡನ ದೂರಿನ ಆಧಾರದ ಮೇಲೆ ಹೆಂಡತಿ ಮತ್ತು ಸ್ನೇಹಿತನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಗಂಡ ವಾಪಸ್​ ಬಾ ಎಂದರೂ ಆಕೆ ಮಾತ್ರ ಇದಕ್ಕೆ ಸುತರಾಂ ಒಪ್ಪುತ್ತಿಲ್ಲ. ಇದರ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts