More

    VIDEO | ಮರದಿಂದ ತಯಾರಾಯ್ತು ಟ್ರೆಡ್‌ಮಿಲ್; ವಿದ್ಯುತ್, ಬ್ಯಾಟರಿ ಯಾವುದು ಬೇಡ…

    ಕೇರಳ: ನಾವೀನ್ಯತೆಯು ಆಧುನಿಕ ಪ್ರಪಂಚದ ಘೋಷವಾಕ್ಯವಾಗಿದೆ. ಹೊಸ ಪ್ರಯೋಗ ಮಾಡುವುದರಲ್ಲಿ ಭಾರತೀಯರು ಯಾವಾಗಲೂ ಸರತಿ ಸಾಲಿನಲ್ಲಿರುತ್ತಾರೆ. ಕೇರಳದ ವ್ಯಕ್ತಿಯೊಬ್ಬರು ಮರವನ್ನು ಬಳಸಿಕೊಂಡು ತಮ್ಮ ವಿಶಿಷ್ಟ ಆವಿಷ್ಕಾರ ಮಾಡಿದ್ದಾರೆ.

    ಇದನ್ನೂ ಓದಿ:  ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ಹೆಚ್ಚಿನವರು ಮನೆಯಲ್ಲೇ ಟ್ರೆಡ್‌ಮಿಲ್ ತಂದಿಟ್ಕೊಳ್ತಾರೆ. ಆದರೆ ಎಲ್ಲರಿಗೂ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕೇರಳದಲ್ಲೊಬ್ಬ ವ್ಯಕ್ತಿ ಮರದ ಟ್ರೆಡ್‌ಮಿಲ್ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ಒಂದು ಸೀರೆ ತಯಾರಿಸಲು ಬೇಕಾಯ್ತು 2 ವರ್ಷ; ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.!

    ಕೇರಳದ ವ್ಯಕ್ತಿ ರವೀಂದ್ರನ್  ವಿದ್ಯುತ್ ಮತ್ತು ಬ್ಯಾಟರಿ ಬಳಸದೆ ಕೆಲಸ ಮಾಡುವ ಮರದ ಟ್ರೆಡ್ ಮಿಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ವಿನೂತನ ಉತ್ಪನ್ನ, ಪರಿಸರ ಸ್ನೇಹಿ ಪರ್ಯಾಯದ ವೀಡಿಯೊ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಜಮೀನು ವಿವಾದ; ತೆಂಗಿನ ತೋಟದಲ್ಲಿ ಮಹಿಳೆಯ ಬಟ್ಟೆ ಹರಿದು ಥಳಿತ

    ಮನೋಜ್ ಕುಮಾರ್ ಎಂದು ಗುರುತಿಸಲಾದ ಟ್ವಿಟ್ಟರ್ ಬಳಕೆದಾರರು ಮರದಿಂದ ತಯಾರಿಸಿರುವ ಟ್ರೆಡ್‌ಮಿಲ್‌ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ಟ್ರೆಡ್‌ಮಿಲ್ ತಯಾರಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನವೋದ್ಯಮಿ ರವೀಂದ್ರನ್ ಅವರು ಕೇರಳದ ವಯನಾಡಿನಲ್ಲಿ ಯಾವುದೇ ವಿದ್ಯುತ್ ಅಥವಾ ಬ್ಯಾಟರಿಯ ಅಗತ್ಯವಿಲ್ಲದೆ ಮರದಿಂದ ಮಾಡಿದ ಟ್ರೆಡ್ ಮಿಲ್ ಅನ್ನು ರಚಿಸಿದ್ದಾರೆ. ಅವರ ಸಾಧನೆಗೆ ಮೆಚ್ಚುಗೆಯಿರಲಿ’ ಎಂದು ಶೀರ್ಷಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟಿಜನ್‌ಗಳು ಅವರ ನಾವೀನ್ಯತೆಯನ್ನು ಹೊಗಳಿದ್ದಾರೆ.

    Shakti Yojana Effect: ಆಟೋ ಚಾಲಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ…ತಿಂಗಳಿಗೆ 10 ಸಾವಿರ ರೂ. ಪರಿಹಾರ ನೀಡಬೇಕು: ಕೋಟ ಶ್ರೀನಿವಾಸ ಪೂಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts