More

    ಕೊಹ್ಲಿ, ತಮನ್ನಾ, ಅಜು ವರ್ಗೀಸ್​ಗೆ ಹೈ ಕೋರ್ಟ್​ ನೋಟಿಸ್​! ರಮ್ಮಿ ಸರ್ಕಲ್​ ತಂದಿಟ್ಟ ಸಂಕಷ್ಟ

    ಕೊಚ್ಚಿ: ಕ್ರಿಕೆಟಿಗ ವಿರಾಟ್ ಕೋಹ್ಲಿ, ಕಲಾವಿದರಾದ ತಮನ್ನಾ ಭಾಟಿಯ ಮತ್ತು ಅಜು ವರ್ಗೀಸ್​ಗೆ ಕೇರಳ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಆನ್​ಲೈನ್​ ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸಂಬಂಧ ನೋಟೀಸು ಕಳುಹಿಸಿಕೊಡಲಾಗಿದೆ.

    ಇದನ್ನೂ ಓದಿ: ಟೀಮ್ ಇಂಡಿಯಾ ಎದುರು ಸೋತ ಆಸೀಸ್ ತಂಡದಲ್ಲಿ ಬದಲಾವಣೆ..!
    ಕೊಚಿಯ ಪೌಲಿ ವದಕ್ಕನ್ ಹೆಸರಿನವರು ಆನ್​ಲೈನ್​ ರಮ್ಮಿ ನಿಲ್ಲಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯ ನೋಟೀಸು ನೀಡಿದೆ. ಆನ್​ಲೈನ್ ರಮ್ಮಿ ಆಟಗಳು ಕಾನೂನುಬಾಹಿರವಾಗಿದ್ದು, ನಿಯಂತ್ರಿಸಲು ಕಷ್ಟಕರವಾದವು ಎನ್ನಲಾಗಿದೆ. ಈ ರೀತಿಯ ಆಟಗಳನ್ನು ನಡೆಸುತ್ತಿರುವ ಕೆಲವು ಪ್ಲಾಟ್​ಫಾರಂಗಳು ಸೆಲೆಬ್ರಿಟಿಗಳನ್ನು ತಮ್ಮ ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿವೆ. ಆ ಮೂಲಕ ಯುವಜನರನ್ನು ಆಕರ್ಷಿಸಿ ಆರ್ಥಿಕವಾಗಿ ಸಂಕಷ್ಟಕ್ಕೀಡುಮಾಡುತ್ತಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

    ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ರಮ್ಮಿ ಗೇಮ್ಸ್​ ನಡೆಸುತ್ತಿವೆ ಎನ್ನಲಾದ ಪ್ಲೇ ಗೇಮ್ಸ್ 24*7 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್ ಕಂಪೆನಿಗಳಿಗೆ ನೋಟೀಸು ಜಾರಿ ಮಾಡಿದೆ. ವಿರಾಟ್ ಕೊಹ್ಲಿ ಮೊಬೈಲ್ ಪ್ರೀಮಿಯರ್ ಲೀಗ್​ನ ಬ್ರಾಂಡ್ ಅಂಬಾಸಿಡರ್ ಆಗಿದ್ದರೆ, ನಟಿ ತಮನ್ನಾ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ಅಜು ವರ್ಗೀಸ್ ರಮ್ಮಿ ಸರ್ಕಲ್​ ಅನ್ನು ಎಂಡಾರ್ಸ್ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: VIDEO| ಬೀದಿನಾಯಿಯ ಮೇಲೆ ಕಾರು ಹತ್ತಿಸಿ ದುಷ್ಕೃತ್ಯ ಮೆರೆದ ಪೊಲೀಸಪ್ಪ!

    ಆನ್​ಲೈನ್​ ಬೆಟ್ಟಿಂಗ್ ಒಂದು ಗಂಭೀರ ಸಾಮಾಜಿಕ ಪಿಡುಗು ಎಂದಿರುವ ನ್ಯಾಯಾಲಯ, ಈ ವಿಚಾರವಾಗಿ ಕೇರಳ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟನೆ ಕೇಳಿದೆ. ಈ ಪ್ಲಾಟ್​ಫಾರಂಗಳನ್ನು ಎಂಡಾರ್ಸ್ ಮಾಡಿರುವುದರ ಬಗ್ಗೆ ವಿವರಣೆ ಕೇಳಿ ಕೊಹ್ಲಿ, ತಮನ್ನಾ ಮತ್ತು ಅಜು ಅವರಿಗೆ ನೋಟೀಸುಗಳನ್ನು ಕಳಹಿಸಿದೆ.(ಏಜೆನ್ಸೀಸ್​)

    ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts