More

    ‘ಉಪವಾಸ ಮಾಡಿ.. ಏಸು ಕಾಣಿಸುತ್ತಾನೆ’ ಎಂದ ಪಾದ್ರಿ; ಮುಂದೆ ಆಗಿದ್ದೇ ಬೇರೆ..

    ಕೀನ್ಯಾ: ದೇವರ ಹೆಸರಿನಲ್ಲಿ ಅಮಾಯಕರ ಪ್ರಾಣ ತೆಗೆದಿರುವ ಘಟನೆ ಕೀನ್ಯಾದ ಮಾಲಿಂಡಿಯಲ್ಲಿ ನಡೆದಿದೆ.

    ಕೀನ್ಯಾದ ಕರಾವಳಿ ಭಾಗದ ಮಾಲಿಂಡಿಯ ಶಕಹೋಲಾ ಅಂಬ ಗ್ರಾಮದಲ್ಲಿ ನಡೆದಿದ್ದು ಇದುವರೆಗೂ 83 ಜನರು ಮೃತಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ.

    ಕಠಿಣ ಉಪವಾಸ ಮಾಡಿ

    ಪಾದ್ರಿಯೊಬ್ಬರು ಇಲ್ಲಿನ ಅಮಾಯಕ ಜನರಿಗೆ ಸಮಾಧಿ ಸ್ಥಿತಿಯಲ್ಲಿ ಕಠಿಣವಾದ ಉಪವಾಸವನ್ನು ಮಾಡಿದರೆ ಏಸು ಕ್ರಿಸ್ತನನ್ನು ಭೇಟಿಯಾಗಬಹುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಜನರು ಸಮಾಧಿ ರ್ಸತಿತಿಯಲ್ಲಿ ಕಠಿಣ ವ್ರತ ಮಾಡಿದ್ದಾರೆ.

    ಉಪವಾಸ ಮಾಡಿದ ಜನ ಸಮಾಧಿಯಲ್ಲಿಯೇ ಮೃತಪಟ್ಟಿದ್ದು ಕೊಳೆತ ಸ್ಥಿತಿಯಲ್ಲಿದ್ದ 83 ಶವಗಳನ್ನು ಪೊಲೀಸರು ಹೊರತೆಗೆದಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ 29 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.

    Chruch father

    ಇದನ್ನೂ ಓದಿ: ಬಿಜೆಪಿಗೆ ಮುಸ್ಲಿಮರ ಮತ ಬೇಕಿಲ್ಲ: ಕೆ.ಎಸ್​. ಈಶ್ವರಪ್ಪ

    212 ಮಂದಿ ನಾಪತ್ತೆ

    ಇನ್ನು ಘಟನೆಗೆ ಸಂಬಂಧಿಸಿದಂತೆ 212 ಮಂದಿ ನಾಪತ್ತೆಯಾಗಿದ್ದು ಅದರಲ್ಲಿ ಬಹುತೇಕರು ಈ ರೀತಿ ಉಪವಾಸ ವ್ತ ಮಾಡಿ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ. ಮೃತರ ಗುರುತು ಹಿಡಿಯುವುದು ಕಷ್ಟಕರವಾದ ಕೆಲಸ ಆಗಿದ್ದು ಆದಷ್ಟು ಬೇಗ ಪತ್ತೆಹಚ್ಚಲಾಗುವುದು ಎಂದು ಕೀನ್ಯಾದ ರೆಡ್​ ಕ್ರಾಸ್​ ಸಂಸ್ಥೆ ತಿಳಿಸಿದೆ.

    ಶಕಹೋಲಾ ಬೀಡು ಬಿಟ್ಟಿರುವ ಪೊಲೀಸರು, ರಕ್ಷಣಾ ಇಲಾಖೆ ಹಾಗೂ ವೈದ್ಯರ ತಂಡ ಮೃತದೇಹಗಳನ್ನು ಹೊರತೆಗೆಯುವ ಕೆಲಸದಲ್ಲಿ ನಿರತವಾಗಿವೆ. ಮೃತರ ಪೈಕಿ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಇದ್ಧಾರೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

    ದುರಂತಕ್ಕೆ ಕಾರಣವಾದ ಪಾದ್ರಿ

    ಮಾಲಿಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಟ-ಮಂತ್ರ, ವಶೀಕರಣ ವಿದ್ಯೆಯಲ್ಲಿ ಕುಖ್ಯಾತಿ ಪಡೆದಿದ್ದ ಪೌಲ್​ ಮೆಕೆನ್ಜೀ ಎಂಬ ಪಾದ್ರಿಯೂ ಈ ದುರಂತಕ್ಕೆ ಕಾರಣವಾಗಿದ್ದು ಆತನನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಪೌಲ್​ ಮೆಕೆನ್ಜೀ ಮಾಲಿಂಡಿಯ ಚರ್ಚ್​​ನಲ್ಲಿ ಪಾದ್ರಿಯಾಗಿದ್ದು ಮಾಟ-ಮಂತ್ರ, ವಶೀಕರಣದ ವಿಚಾರವಾಗಿ ಎರಡು ಬಾರಿ ಸೆರೆವಾಸ ಅನುಭವಿಸಿ ಬಿಡುಗಡೆ ಹೊಂದಿದ್ದ. ಘಟನೆಯ ನಂತರ ಪಾದ್ರಿಯನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts