More

    ದ್ವಿಶತಕ ಸಿಡಿಸಿದರೂ, ಕೌಂಟಿ ಕ್ರಿಕೆಟಿಗನನ್ನು ತಂಡದಿಂದ ಹೊರದಬ್ಬಿದ ಸೆಲ್ಫಿ!

    ಲಂಡನ್: ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನ ಕೆಂಟ್ ತಂಡದ ಯುವ ಬ್ಯಾಟ್ಸ್‌ಮನ್ ಜೋರ್ಡನ್ ಕಾಕ್ಸ್ ದ್ವಿಶತಕ ಸಿಡಿಸಿ ಭರ್ಜರಿ ನಿರ್ವಹಣೆ ತೋರಿದರೂ ಈಗ ತಂಡದಿಂದ ಹೊರಬಿದ್ದಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸೆಲ್ಫಿ! ಹೌದು, ಕೋವಿಡ್-19 ಮಾರ್ಗಸೂಚಿಗಳನ್ನು ಮೀರಿ, ಅಭಿಮಾನಿಗಳ ಜತೆಗೆ ಸೆಲ್ಫಿಗೆ ಪೋಸ್ ನೀಡಿರುವುದೇ ಈಗ 19 ವರ್ಷದ ಬ್ಯಾಟ್ಸ್‌ಮನ್ ಜೋರ್ಡನ್ ಕಾಕ್ಸ್‌ಗೆ ಮುಳುವಾಗಿದೆ.

    ಜೋರ್ಡನ್ ಕಾಕ್ಸ್ ಸೋಮವಾರವಷ್ಟೇ ಸಸೆಕ್ಸ್ ವಿರುದ್ಧದ ಬಾಬ್ ವಿಲ್ಲಿಸ್ ಟ್ರೋಫಿಯ ಚತುರ್ದಿನ ಪಂದ್ಯದಲ್ಲಿ ಅಜೇಯ 237 ರನ್ (570 ಎಸೆತ, 47 ಬೌಂಡರಿ, 3 ಸಿಕ್ಸರ್) ಸಿಡಿಸಿ ಕೆಂಟ್ ತಂಡದ ಪರ ದಾಖಲೆ ಬರೆದಿದ್ದರು. ಪಂದ್ಯದಲ್ಲಿ ಜಾಕ್ ಲೀನಿಂಗ್ ಜತೆಗೆ 423 ರನ್‌ಗಳ ಜತೆಯಾಟವನ್ನೂ ನಡೆಸಿ ಮಿಂಚಿದ್ದರು. ಅವರು 21ನೇ ಶತಮಾನದಲ್ಲಿ ಜನಿಸಿದ ಕ್ರಿಕೆಟಿಗರ ಪೈಕಿ ಇಂಗ್ಲೆಂಡ್‌ನಲ್ಲಿ ಪ್ರಥಮ ದರ್ಜೆ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದರು. ಆದರೆ ಪಂದ್ಯದ ಬಳಿಕ ಅವರು ಕೆಲ ಅಭಿಮಾನಿಗಳ ಜತೆಗೆ ಸೆಲ್ಫಿಗೆ ಪೋಸ್ ನೀಡಿದ್ದು, ಕೋವಿಡ್-19 ಮಾರ್ಗಸೂಚಿಯ ಉಲ್ಲಂಘನೆ ಎನಿಸಿದೆ. ಇದರಿಂದಾಗಿ ಅವರು ಶನಿವಾರದಿಂದ ಮಿಡ್ಲ್‌ಸೆಕ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ತಂಡದಿಂದ ಹೊರಬಿದ್ದಿದ್ದಾರೆ.

    ಇದನ್ನೂ ಓದಿ: ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟಿಗ ಆತ್ಮಹತ್ಯೆ, ಐಪಿಎಲ್ ಅವಕಾಶ ಕೈತಪ್ಪಿದ್ದೇ ಕಾರಣ!

    ಘಟನೆಯ ಬಗ್ಗೆ ಜೋರ್ಡನ್ ಕಾಕ್ಸ್ ಅವರೀಗ ಕ್ಷಮೆಯಾಚಿಸಿದ್ದಾರೆ. ಕಾಕ್ಸ್ ಇನ್ನು ಸ್ವಯಂ ಐಸೋಲೇಷನ್‌ನಲ್ಲಿರಲಿದ್ದಾರೆ. ಅಲ್ಲದೆ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಅವರು ಮತ್ತೆ ತಂಡದೊಳಗೆ ಪ್ರವೇಶ ಪಡೆಯಲಿದ್ದಾರೆ.

    ಐಪಿಎಲ್​ಗೆ ಮುನ್ನ ರಾಜಸ್ಥಾನ ರಾಯಲ್ಸ್​-ಕಿಂಗ್ಸ್​ ಇಲೆವೆನ್​ ಪಂಜಾಬ್​ ಟ್ಯಾಟೂ ವಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts