More

    ಕೆಂಚಮ್ಮ, ದುರಗಮ್ಮ ದೇವಿಯ ಕುಂಭೋತ್ಸವ ಅದ್ದೂರಿ

    ಗೊರೇಬಾಳ: ಗ್ರಾಮದ ಆರಾಧ್ಯ ದೇವತೆಗಳಾದ ಕೆಂಚಮ್ಮ, ದುರಗಮ್ಮ ಜಾತ್ರಾ ಮಹೋತ್ಸವ ದ ಅಂಗವಾಗಿ ಕಾರ್ತಿಕ ಮಾಸದ ಚತುರ್ದಶಿ ಭಾನುವಾರ ಮಹಿಳೆಯರಿಂದ ಕಳಸ ಹಾಗೂ ಕುಂಭೋತ್ಸವ ಭಾಜಾ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ 5ಕ್ಕೆ ಕೆಂಚಮ್ಮ, ದುರಗಮ್ಮ ಮೂರ್ತಿಗಳಿಗೆ ವಿಶ್ವಕರ್ಮ ಸಮಾಜದ ಅಂಬಣ್ಣ ಹಾಗೂ ಸಹೋದರರು ವಿಶೇಷ ಅಲಂಕಾರ ಮಾಡುವ ಮೂಲಕ ಪೂಜಾ ಕೈಂಕರ್ಯ ನೆರವೇರಿಸಿದರು.

    ಡೊಳ್ಳಿನ ಕುಣಿತ ಜನರಿಗೆ ಆಕರ್ಷಣೆ

    ಬಳಿಕ ಗಂಗಾ ಪೂಜೆಗೆ ತೆರಳಿ ಪೂಜೆ ಸಲ್ಲಿಸಿ, ನೂರಾರು ಭಕ್ತರೊಂದಿಗೆ ಕಳಸ, ಕುಂಭಗಳೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನ ಬರಲಾಯಿತು. ದಾರಿಯುದ್ದಕ್ಕೂ ಡೊಳ್ಳಿನ ಕುಣಿತ ಜನರ ಆಕರ್ಷಣೆಯಾಗಿತ್ತು. ಸೋಮವಾರ ದೇವತೆಗಳ ಮೂರ್ತಿಗಳಿಗೆ ಪೂಜಾ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಪೂಜೆ ಜರುಗುತ್ತದೆ. ನಂತರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

    ಇದನ್ನೂ ಓದಿ: ಕಾಂತಾರ ಚಾಪ್ಟರ್​ 1 ಮುಹೂರ್ತ ಕ್ಲ್ಯಾಪ್​ ಬೋರ್ಡ್​, ಸ್ಕ್ರಿಪ್ಟ್​ ಪೂಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts