More

    ಕುಳಿತಲ್ಲಿಂದಲೇ ದೆಹಲಿಯ ಮಾರುಕಟ್ಟೆಯಲ್ಲಿ ಶಾಪಿಂಗ್! ಕೇಜ್ರಿವಾಲ್​ರ ಹೊಸ ಯೋಜನೆ

    ನವದೆಹಲಿ: ದೆಹಲಿಯ ಎಷ್ಟೋ ವಸ್ತುಗಳು ಜನಪ್ರಿಯವಾಗಿದ್ದು, ದೇಶದಾದ್ಯಂತದ ಜನರು ಅಲ್ಲಿ ಶಾಪಿಂಗ್​ ಮಾಡುವ ಆಸೆ ಹೊಂದಿರುತ್ತಾರೆ. ಇಂತಹ ಆಸೆಗೆ ಇನ್ನು ಕೆಲವು ತಿಂಗಳಲ್ಲಿ ರೆಕ್ಕೆಗಳು ಸಿಗಲಿವೆ. ಏಕೆಂದರೆ, ದೆಹಲಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯುವ ವಿಶಿಷ್ಟ ಪೋರ್ಟಲ್​ಅನ್ನು ದೆಹಲಿ ಸರ್ಕಾರ ನಿರ್ಮಿಸಲಿದೆ.

    ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ವೃತ್ತಿಶೀಲರು ತಮ್ಮ ಉತ್ಪನ್ನಗಳನ್ನು ಜಗತ್ತಿನ ಎಲ್ಲೆಡೆಗೂ ಮಾರಾಟ ಮಾಡಲು ಸಾಧ್ಯವಾಗುವಂತಹ ‘ದೆಹಲಿ ಬಜಾರ್​​’ ವೆಬ್​ ಪೋರ್ಟಲ್​ಅನ್ನು ಶೀಘ್ರವೇ ಲಾಂಚ್​ ಮಾಡಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: ಟೈಪಿಂಗ್‌ ಬಲ್ಲಿರಾ? ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇವೆ 150 ಟೈಪಿಸ್ಟ್‌ ಹುದ್ದೆಗಳು: ಅರ್ಜಿ ಆಹ್ವಾನ

    ದೆಹಲಿಯ ಖ್ಯಾತ ಹೌಜ್​ ಖಾಸ್​, ಖಾನ್​ ಮಾರ್ಕೆಟ್​ ಮುಂತಾದೆಡೆಗಳಿಂದ ಇಡೀ ಜಗತ್ತಿನಾದ್ಯಂತದ ಕೊಳ್ಳುಗರು ನೇರವಾಗಿ ಸಾಮಾನುಗಳನ್ನು ಖರೀದಿಸಬಹುದು ಎಂದು ಘೋಷಿಸಿರುವ ಕೇಜ್ರಿವಾಲ್​, ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಬಿಸಿನೆಸ್​ಮೆನ್​ಗಳಿಗೆ ಇದು ತಮ್ಮ ದೊಡ್ಡ ಸುದ್ದಿ ಎಂದಿದ್ದಾರೆ. ಅಲ್ಲಿನ ಇಡೀ ಮಾರುಕಟ್ಟೆ ಈ ಪೋರ್ಟಲ್​ನಲ್ಲಿ ಲಭ್ಯವಾಗಲಿದ್ದು, ದೆಹಲಿಯ ಜಿಡಿಪಿಯನ್ನು, ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

    ಅಕ್ರಮ ಸಂಬಂಧ ಬಹಿರಂಗ: ಒಂದು ಆತ್ಮಹತ್ಯೆ, ಒಂದು ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts