More

    ‘ಹೌದು.. ನಾನು ಭಯೋತ್ಪಾದಕನೇ..’ ಎಂದು ಒಪ್ಪಿಕೊಂಡ ಕೇಜ್ರಿವಾಲ್; ಅಸಲಿ ವಿಷ್ಯ ಏನು?

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೆಲವರು ಭಯೋತ್ಪಾದಕ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಹೌದು.. ನಾನು ಭಯೋತ್ಪಾದಕನೇ’ ಎಂದು ಒಪ್ಪಿಕೊಂಡಿದ್ದಾರೆ. ನಾನು ಭಯೋತ್ಪಾದಕ ಎನ್ನುತ್ತಲೇ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರವನ್ನೂ ನೀಡಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಎಲ್ಲ ವಿರೋಧ ಪಕ್ಷಗಳ ನಾಯಕರು ಒಗ್ಗೂಡಿ ಆಪ್ ವಿರುದ್ಧ ಹರಿಹಾಯುತ್ತಿದ್ದಾರೆ. ಏಕೆಂದರೆ ಅವರು ಆಮ್​ ಆದ್ಮಿ ಪಕ್ಷದ ಗೆಲುವನ್ನು ಮತ್ತು ಪ್ರಾಮಾಣಿಕ ಭಗವಂತ್ ಮನ್ ಪಂಜಾಬ್​ನ ಮುಂದಿನ ಮುಖ್ಯಮಂತ್ರಿ ಆಗುವುದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಎಲ್ಲ ನಾಯಕರೂ ನನ್ನ ವಿರುದ್ಧ ಒಂದೇ ರೀತಿಯ ಭಾಷಾ ಪ್ರಯೋಗ ಮಾಡುತ್ತಿರುವುದು ನನಗೆ ಅಚ್ಚರಿ ಎನಿಸುತ್ತಿದೆ. ಮೊದಲಿಗೆ ರಾಹುಲ್ ಗಾಂಧಿ ನನ್ನನ್ನು ಭಯೋತ್ಪಾದಕ ಎಂದರು, ನಂತರ ಪ್ರಧಾನಿ ಮೋದಿ ಕೂಡ ನನ್ನನ್ನು ಭಯೋತ್ಪಾದಕ ಎಂದರು. ಬಳಿಕ ಪ್ರಿಯಾಂಕಾ ಗಾಂಧಿ, ಸುಖ್​ಬೀರ್​ ಸಿಂಗ್ ಬಾದಲ್, ಚರಣ್​ಜಿತ್ ಸಿಂಗ್ ಚನ್ನಿ ಕೂಡ ಅದನ್ನೇ ಹೇಳಿದರು. ಒಂದು ದಿನ ಒಬ್ಬ ಕವಿ ನನ್ನ ವಿರುದ್ಧ ಆರೋಪ ಮಾಡಿದ, ಆ ಬಳಿಕ ಈ ಎಲ್ಲ ಪ್ರತಿಪಕ್ಷ ನಾಯಕರು ಸೇರಿಕೊಂಡು ನನ್ನನ್ನು ಭಯೋತ್ಪಾದಕ ಎನ್ನುತ್ತಿದ್ದಾರೆ.

    ಇದನ್ನೂ ಓದಿ: ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ

    ಹಾಗಾದರೆ ನಾನು ಅಂಥ ಭಯೋತ್ಪಾದಕ ಆಗಿದ್ದರೆ ಇವರೆಲ್ಲ ಇಷ್ಟು ವರ್ಷ ಏನು ಮಾಡುತ್ತಿದ್ದರು? ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 7 ವರ್ಷ ಅಧಿಕಾರದಲ್ಲಿತ್ತು. ಒಂದುವೇಳೆ ನಾನು ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದರೆ ಏಕೆ ನನ್ನ ವಿರುದ್ಧ ಕ್ರಮಕೈಗೊಳ್ಳಲಿಲ್ಲ? ಯಾಕೆ ನನ್ನ ವಿರುದ್ಧ ತನಿಖೆ ನಡೆಸಲಿಲ್ಲ? ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ಜಗತ್ತಿನಲ್ಲಿ ಎರಡು ರೀತಿಯ ಭಯೋತ್ಪಾದಕರು ಇರುತ್ತಾರೆ. ಒಂದು ಜನರನ್ನು ಹೆದರಿಸುವವರು, ಇನ್ನೊಂದು ಭ್ರಷ್ಟ ಹಾಗೂ ಕಳ್ಳ ರಾಜಕಾರಣಿಗಳನ್ನು ಹೆದರಿಸುವವರು. ಹೌದು.. ನನ್ನನ್ನು ನೋಡಿ ಹೆದರುತ್ತಿರುವ ಈ ಭ್ರಷ್ಟ ಹಾಗೂ ಕಳ್ಳ ರಾಜಕಾರಣಿಗಳ ಪಾಲಿಗೆ ನಾನು ಭಯೋತ್ಪಾದಕನೇ ಎಂದು ತಿರುಗೇಟು ನೀಡಿದ್ದಾರೆ.

    ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts