More

    ಸಮುದಾಯದ ವಿಚಾರದಲ್ಲಿ ರಾಜಕೀಯ ಬದಿಗಿಡಿ

    ಕೋಲಾರ: ವಿಶ್ವಕರ್ಮರು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಮುದಾಯದ ವಿಚಾರ ಬಂದಾಗ ರಾಜಕೀಯ ಬದಗಿಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುಲಕಸುಬುಗಳನ್ನು ನಡೆಸಿಕೊಂಡು ಹೋಗಲು ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರಮೋದಿ ಅವರು ಸಾಂಪ್ರದಾಯಿಕ ೧೮ ಕುಲ ಕಸಬು ಮಾಡುವ ಜನಾಂಗಗಳ ಅಭಿವೃದ್ಧಿಗೆ ಪಿ.ಎಂ.ವಿಶ್ವಕರ್ಮ ಯೋಜನೆಗೆ ೧೩,೬೦೦ ಕೋಟಿ ರೂ. ಮಂಜೂರು ಮಾಡಿದ್ದು, ಸಾಲದ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
    ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಕಾಳಿಕಾಂಬಾ ಕಮ್ಮಟೇಶ್ವರ ದೇವಾಲಯದ ವಿಚಾರವಾಗಿ ಮುಜರಾಯಿ ಇಲಾಖೆ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರೊAದಿಗೆ ಸಭೆ ನಡೆಸಿ ಸಮುದಾಯಕ್ಕೆ ಅಗುವ ಅನುಕೂಲ ಮಾಡುತ್ತೇನೆ ಎಂದರು.
    ಇದೇ ಸಂದರ್ಭ ಶಿವಾರಪಟ್ಟಣದ ಶಿಲ್ಪಿ ಮಹಾದೇವ ಪಾಂಜಾಲ ವಿಶ್ವಕರ್ಮ ಅವರು ಭಗವಾನ್ ಶ್ರೀ ವಿಶ್ವಕರ್ಮ ಕುರಿತು ಉಪನ್ಯಾಸ ನೀಡಿದರು.
    ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಶಿವಣ್ಣ, ರಾಜ್ಯ ವಿಶ್ವಕರ್ಮ ಸಮಾಜದ ಜಿಲ್ಲಾ ನಿರ್ದೇಶಕ ಕೆ.ಎನ್.ಮುರಳಿ, ಜಿಲ್ಲಾ ವಿಶ್ವಕರ್ಮ ಸಮುದಾಯಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ವಿ.ಜಗದೀಶ್ವರಾಚಾರಿ, ಮುಖಂಡರಾದ ವೇಣುಗೋಪಾಲ್, ಎಸ್.ಪುಟ್ಟಸ್ವಾಮಾಚಾರ್, ಸೂಲೂರು ಚಿನ್ನಾಚಾರ್, ಎಸ್.ಹನುಮಂತಾಚಾರ್, ತ್ಯಾಗರಾಚಾರಿ, ಪೂರ್ಣಚಂದ್ರಾಚಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts