More

    ನೀವಿರುವಲ್ಲೇ ಸಿಇಟಿ ಬರೀರಿ; ಎಕ್ಸಾಮ್ ಸೆಂಟರ್ ಬೇಕಿದ್ರೆ ಬದಲಿಸಿಕೊಳ್ಳಿ

    ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೂಡ ವಿದ್ಯಾರ್ಥಿಗಳು ನೆಲೆಸಿರುವ ಸ್ಥಳದಲ್ಲೇ ಬರೆಯಲು ಅವಕಾಶ ಕಲ್ಪಿಸಿದೆ.

    ಪರಿಷ್ಕೃತ ವೇಳಾಪಟ್ಟಿಯಂತೆ ಸಿಇಟಿ- 2020 ಜು.30 ಮತ್ತು 31ರಂದು ನಡೆಯಲಿದೆ. ಕರೊನಾದಿಂದ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಅಭ್ಯರ್ಥಿಗಳು ನೆಲೆಸಿರುವ ಸಮೀಪದ ಸ್ಥಳಗಳಲ್ಲೇ ಸಿಇಟಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತಿದೆ.

    ಇದನ್ನೂ ಓದಿ ಜುಲೈ 30, 31 ರಂದು ಸಿಇಟಿ, ಸೆಪ್ಟೆಂಬರ್​ 1ರಂದು ಕಾಲೇಜು ಆರಂಭ

    ಈ ನಿಟ್ಟಿನಲ್ಲಿ ಹೊಸದಾಗಿ 75 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಸ್ಥಳಗಳನ್ನು ಪ್ರಕಟಿಸಲಾಗಿದೆ. ಪಟ್ಟಿ ನೋಡಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಬಹುದು. ಆದ್ಯತೆ ಮೇರೆಗೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಲಾಗುತ್ತದೆ.

    ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಬಯಸುವವರು ಮೇ 20ರ ಸಂಜೆ 6ರಿಂದ 22ರ ಸಂಜೆ 6 ಗಂಟೆ ವರೆಗೆ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಬಹುದು. ತಾವು ಈಗಾಗಲೇ ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿ ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಬಹುದು ಎಂದು ಪ್ರಾಧಿಕಾರ ತಿಳಿಸಿದೆ.

    ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಯಾವ ದಿನ ಯಾವ ವಿಷಯ ನೋಡಿ​ಕೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts