More

    KEA Exam Scam; ‘ಸರ್ಕಾರ’ ಎಂಬ ಹೆಸರಿನಿಂದ ಅಕ್ರಮದಲ್ಲಿ ಭಾಗಿಯಾಗಿರೋ ಅಭ್ಯರ್ಥಿಗಳಿಗೆ ವಾಟ್ಸಪ್ ಕಾಲ್

    ಬೆಂಗಳೂರು: ಯಾದಗಿರಿಯಲ್ಲಿ ನಿಗಮ ಮಂಡಳಿಗಳಲ್ಲಿನ ಎಫ್‌ಡಿಎ ಹುದ್ದೆ ಭರ್ತಿಗಾಗಿ ಅ.28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ತನಿಖೆ ನಡೆಸುತ್ತಿರುವ ಯಾದಗಿರಿ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ.

    ಯಾದಗಿರಿ ಜಿಲ್ಲೆಯ ಐದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಹೋಗಿ 11 ಜನ ಬಂಧನವಾಗಿದ್ದರು. ಹೊರಗಿದ್ದು ಪರೀಕ್ಷೆ ಬರೆಯುವವರಿಗೆ ಸಹಾಯ ಮಾಡಲು ಹೋಗಿ ಐದು ಜನ ಅರೆಸ್ಟ್ ಆಗಿದ್ದರು. 16 ಜನರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

    ಪ್ರಕರಣದ 16 ಜನ ಆರೋಪಿಗಳಲ್ಲಿ ಓರ್ವನು, “ಸರ್ಕಾರ” ಎಂದು ನಂಬರ್​ ಸೇವ್​ ಮಾಡಿಕೊಂಡಿದ್ದಾನೆ. ಸರ್ಕಾರ ಎಂಬ ನಂಬರ್​​ನಿಂದ ಪರೀಕ್ಷೆ ನಡೆಯುವ ಒಂದು ದಿನ ಮೊದಲು ಆರೋಪಿಗೆ ವಾಟ್ಸಪ್ ಕಾಲ್ ಬಂದಿದೆ. ಈ ಸರ್ಕಾರ ಎಂಬ ಹೆಸರಿನ ವ್ಯಕ್ತಿಯೇ ಕೆಇಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಎಂಬ ಶೆಂಕೆ ವ್ಯಕ್ತವಾಗಿದೆ. ಸರ್ಕಾರ ಎಂಬ ಹೆಸರಿನ ವ್ಯಕ್ತಿ ಆಡಿಯೋ ಕಾಲ್ ಮಾಡಿ ಅಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದನು. ಈ ಸರ್ಕಾರ ಎಂಬ ಹೆಸರಿನ ನಂಬರ್ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ಮೂಲದ್ದು ಎಂದು ಪೊಲೀಸ್​  ತಿಳಿದುಬಂದಿದೆ.

    ಪರೀಕ್ಷೆ ನಡೆಯುವ ಎರಡು ದಿನಗಳ ಮೊದಲು ಅಂದರೆ ಗುರುವಾರ (ಅ.26) ಸಂಜೆ 6.17ಕ್ಕೆ ಬಸವರಾಜ್‌ ಎಂಬಾತನ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಆರೋಪಿಗೆ ಮೆಸೇಜ್‌ ಮಾಡಿದ್ದ “ಸರ್ಕಾರ್‌”, ಶುಕ್ರವಾರ ರಾತ್ರಿ 10.30ಕ್ಕೆ ಹಾಗೂ ಪರೀಕ್ಷಾ ದಿನವಾದ ಶನಿವಾರ ಮಧ್ಯಾಹ್ನ 12 ರಿಂದ 1.30ರವರೆಗೆ ಸತತ ವಾಟ್ಸಪ್‌ನಲ್ಲಿ ಮಿಸ್ಡ್‌ ಕಾಲ್ ನೀಡಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲ್ಪುರದ ವಿಳಾಸ ಹೊಂದಿದ್ದ ಈ ಸಿಮ್ ಅನ್ನು ವಾಟ್ಸಪ್ ಕಾಲ್‌ಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts