More

    ಬಸ್ ಗಾಗಿ ಕೆಡಿಪಿ ಸಭೆಗೆ ಲಗ್ಗೆ ಇಟ್ಟಿದ್ದ ವಿದ್ಯಾರ್ಥಿಗಳು

    ಹುಬ್ಬಳ್ಳಿ: ತಾಲೂಕಿನ ನಾಗರಹಳ್ಳಿಯಿಂದ ಶಿರಗುಪ್ಪಿಗೆ ಸಾರಿಗೆ ಸೌಕರ್ಯ ಒದಗಿಸುವಂತೆ ಆಗ್ರಹಿಸಲು ನಾಗರಹಳ್ಳಿ ಗ್ರಾಮದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಗ್ರಾಮದಿಂದ ನೇರವಾಗಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಗೆ ಲಗ್ಗೆ ಇಟ್ಟಿದ್ದ ಪ್ರಸಂಗಕ್ಕೆ ಬುಧವಾರ ಸಾಯಾಯಿತು.
    30ಕ್ಕೂ ಹೆಚ್ಚು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇಲ್ಲಿನ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಆಗಮಿಸಿದ್ದರು. ಕೂಡಲೇ ಬಸ್​ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಲ್ಲಿ ಪಟ್ಟು ಹಿಡಿದಿದ್ದರು.
    ನಾಗರಹಳ್ಳಿ- ಶಿರಗುಪ್ಪಿ ನಡುವೆ 8 ಕಿ.ಮೀ. ಅಂತರವಿದೆ. ನಾಗರಹಳ್ಳಿಯಿಂದ ನಿತ್ಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿರಗುಪ್ಪಿಗೆ ತೆರಳುತ್ತಾರೆ. ಬಸ್​ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಸದ್ಯ ಭಂಡಿವಾಡ ಕ್ರಾಸ್​ಗೆ ಇಳಿದು, ಬೇರೆ ಬಸ್​ನಲ್ಲಿ ಗ್ರಾಮಕ್ಕೆ ಬರಬೇಕಾಗಿದೆ. ಇದರಿಂದಾಗಿ ನಿತ್ಯ ಮನೆ ಸೇರಲು ರಾತ್ರಿ 8 ಗಂಟೆ ಆಗುತ್ತಿದೆ. ಮಳೆಗಾಲ ಆದ್ದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮೊದಲು ಬಸ್​ ಸೌಕರ್ಯ ಇತ್ತು. ಕರೊನಾ ನಂತರ ಬಂದ್​ ಆಗಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ್​ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ಆಗ್ರಹಿಸಿದರು.
    ಗ್ರಾಮಸ್ಥರಾದ ಅಮೃತಯ್ಯ ಐನಾಪುರಮಠ, ಹನುಮಂತಗೌಡ ನಾಗನಗೌಡ್ರ, ಮಹಾದೇವಗೌಡ ಪಾಟೀಲ, ಶಿವನಗೌಡ ಶಿರಸಂಗಿ, ಮಲ್ಲಿಕಾರ್ಜುನ ಮುದ್ದುನವರ, ಇತರರು ಇದ್ದರು.

    ಮಕ್ಕಳಲ್ಲಿ ಕ್ಷಮೆ ಕೋರಿದ ಸಚಿವ ಮುನೇನಕೊಪ್ಪ
    ಸಭೆ ಆರಂಭಕ್ಕೂ ಮುನ್ನ ಮಕ್ಕಳ ಸಮಸ್ಯೆ ಬಗ್ಗೆ ಆಲಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ವಿದ್ಯಾರ್ಥಿಗಳಲ್ಲಿ ಕ್ಷಮೆ ಕೋರಿದರು. “ಇಷ್ಟು ಸಣ್ಣ ಸಮಸ್ಯೆಗೆ ಮಕ್ಕಳು ಇಲ್ಲಿಯವರೆಗೆ ಬಂದಿದ್ದಾರೆ. ಈ ಸಮಸ್ಯೆ ನನ್ನವರೆಗೂ ಬರಬಾರದಿತ್ತು. ಇದಕ್ಕೆ ಅಧಿಕಾರಿಗಳೇ ಹೊಣೆ. ನಿಮ್ಮ ಮಕ್ಕಳೇ ಹೀಗೆ ಬಂದಿದ್ದರೆ ಏನಾಗುತ್ತಿತ್ತು. ಇದರಿಂದ ಸಂಸ್ಥೆಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಬಸ್​ ಸೌಕರ್ಯ ಆರಂಭಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts