More

    ತಾಲೂಕಿನಲ್ಲಿ ಇನ್ಮುಂದೆ ಬೋರ್​ವೆಲ್​ಗಿಲ್ಲ ಅನುಮತಿ

    ಕೊಪ್ಪ: ತಾಲೂಕಿನಲ್ಲಿ ಅಗತ್ಯವಿಲ್ಲದ ಕಡೆ ಕುಡಿಯುವ ನೀರಿಗಾಗಿ ಬೋರ್​ವೆಲ್ ಕೊರೆಸಲು ಅನುಮತಿ ನೀಡಬೇಡಿ. ಇದರಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಾಪಂ ಇಒ ನವೀನ್​ಕುಮಾರ್ ಅವರಿಗೆ ಶಾಸಕ ರಾಜೇಗೌಡ ಸೂಚಿಸಿದರು.

    ಶುಕ್ರವಾರ ನಡೆದ ತಾಪಂ ತ್ರೖೆಮಾಸಿಕ ಕೆಡಿಪಿ ಮುಂದುವರಿದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮನೆಗೊಂದು ಬೋರ್​ವೆಲ್ ಕೊರೆಸಲಾಗುತ್ತಿದೆ. ಇದರಿಂದ ಗ್ರಾಪಂಗಳಿಗೆ ನಿರ್ವಹಣೆ ಕಷ್ಟವಾಗಲಿದೆ. ಮುಂದಿನ ದಿನದಲ್ಲಿ ಅನುಮತಿ ಕೊಡುವುದನ್ನು ನಿಲ್ಲಿಸಬೇಕು.ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ನವೀನ್​ಕುಮಾರ್, ಇನ್ನುಮುಂದೆ ವೈಯಕ್ತಿಕವಾಗಿ ಬೋರ್​ವೆಲ್ ಕೊರೆಯಲು ಅನುಮತಿ ನೀಡದಂತೆ ಎಲ್ಲ ಪಿಡಿಒಗಳಿಗೂ ಸೂಚಿಸುತ್ತೇನೆ ಎಂದು ಹೇಳಿದರು.

    ಜಿಪಂ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಬೋರ್​ವೆಲ್​ಗಳಿಂದ ಮನೆ ಮನೆಗೆ ನೀರು ನೀಡುವುದಕ್ಕಿಂದ ಹೊಳೆ ನೀರನ್ನು ಉಪಯೋಗಿಸುವುದು ಅನುಕೂಲ. ಬಹುಗ್ರಾಮ ನೀರಿನ ಯೋಜನೆಯಡಿ ಈ ಹಿಂದೆ ತುಂಗಾ ನದಿಯಿಂದ ನೀರೋದಗಿಸುವ ಯೋಜನೆಗೆ ರೂಪುರೇಷೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅದು ಮಂದಗತಿಯಿಂದ ಸಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts