More

    ಅಭಿವೃದ್ಧಿಯಲ್ಲಿ ಮೂಡಿಗೆರೆ ತಾಪಂ ಪ್ರಥಮ

    ಮೂಡಿಗೆರೆ: ಮೂಡಿಗೆರೆಯನ್ನು ಕೇಂದ್ರ ಸರ್ಕಾರ ರಾಜ್ಯದಲ್ಲೇ ನಂ.1 ತಾಪಂ ಎಂದು ಘೊಷಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ನನ್ನ ನಾಲ್ಕೂವರೆ ವರ್ಷದ ಅಧ್ಯಕ್ಷ ಅವಧಿಯ ಆಗಿರುವ ಅಭಿವೃದ್ಧಿಗೆ ಸಾಕ್ಷಿ ಎಂದು ಕೆ.ಸಿ.ರತನ್ ಹೇಳಿದರು.

    ತಾಲೂಕಿನಲ್ಲಿ 12,800 ಶೌಚಗೃಹಗಳನ್ನು ನಿರ್ವಿುಸಿ ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ರೂಪಿಸಲಾಗಿದೆ. ತಾಲೂಕಿನ 24 ಹಾಸ್ಟೆಲ್​ಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ತಾಲೂಕಿನ 29 ಗ್ರಾಪಂಗಳ ಪೈಕಿ 22 ಗ್ರಾಪಂಗಳಿಗೆ ಹೊಸ ಕಟ್ಟಡ ನಿರ್ವಿುಸಲಾಗಿದೆ. 70 ಲಕ್ಷ ರೂ. ವೆಚ್ಚದಲ್ಲಿ ತಾಪಂಗೆ ಹೊಸ ಕಟ್ಟಡ, ಕೇಂದ್ರ ಸರ್ಕಾರದ ಪ್ರಶಸ್ತಿಯಿಂದ ಬಂದ 5 ಲಕ್ಷ ರೂ.ನಲ್ಲಿ ದೀನ್ ದಯಾಳ್ ಸಭಾಂಗಣ ನಿರ್ವಿುಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    21 ಗ್ರಾಪಂಗಳಿಗೆ ಕಸ ವಿಲೇವಾರಿಗೆ ಜಾಗ ಹಾಗೂ 6 ಗ್ರಾಪಂಗೆ ಕಸ ವಿಲೇ ಆಟೋ ವಿತರಿಸಲಾಗಿದೆ. ಲಾಕ್​ಡೌನ್ ವೇಳೆ ತಾಲೂಕಿನ ಎಲ್ಲ 29 ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸಿ ಕ್ರಮ ಕೈಗೊಂಡಿದ್ದರಿಂದ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಅತಿವೃಷ್ಟಿ ನಿಭಾಯಿಸಲು ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

    ತಾಲೂಕಿನಲ್ಲಿ ಶೇ.70 ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. 30ರಷ್ಟು ಒಳ್ಳೆಯ ಅಧಿಕಾರಿಗಳಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಿದ್ದೇನೆ. ಬಿ.ಬಿ.ನಿಂಗಯ್ಯ, ಮಾಜಿ ಎಂಎಲ್​ಸಿ ಮೋಟಮ್ಮ, ಎಂಎಲ್​ಸಿ ಎಂ.ಕೆ.ಪ್ರಾಣೇಶ್, ಜಿಪಂ, ತಾಪಂ ಸದಸ್ಯರು ತನಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

    ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್.ದೇವರಾಜು, ಕಸಬ ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಶಾಂತ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts