More

    ಮಂಡ್ಯದ ಮರುವನಹಳ್ಳಿಯಲ್ಲಿ ಸೋಂಕು ಹೆಚ್ಚಲು ಮಾವಿನಹಣ್ಣು ಕಾರಣವಂತೆ!

    ಮಂಡ್ಯ: ಕೆ.ಆರ್​.ಪೇಟೆ ತಾಲೂಕಿನ ಮರುವನಹಳ್ಳಿಯಲ್ಲಿ ಸೋಂಕು ಹರಡಲು ಕಾರಣ ಮಾವಿನಹಣ್ಣು ಎಂದು ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

    ಗ್ರಾಮದಲ್ಲಿ ಈವರೆಗೆ 14 ಜನರಿಗೆ ಕರೊನಾ ಪಾಸಿಟಿವ್​ ಬಂದಿದ್ದು, ಐಸೋಲೇಷನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಸೋಂಕು ಹರಡಲು ಮುಂಬೈನಿಂದ ಬಂದ ಪಿ.869 ಕಾರಣ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ಹೇಳಲಾಗುತ್ತಿದೆ. ಆದರೆ, ಸಚಿವರ ಹೇಳಿಕೆ ಈಗ ಗೊಂದಲಕ್ಕೆ ಕಾರಣವಾಗಿದೆ.

    ಇದನ್ನೂ ಓದಿರಿ ಇಲ್ನೋಡಿ ಪೊಲೀಸರು ಕೊಟ್ಟ ‘ಕುಚ್ ಕುಚ್ ಹೋತಾ ಹೈ’ ಟ್ವಿಸ್ಟ್​ ಏನಂತ..!

    ಸಚಿವರ ಪ್ರಕಾರ ಕರೊನಾ ಹರಡಲು ಮಾವಿನ ಹಣ್ಣು ಕಾರಣವಂತೆ. ಗ್ರಾಮದಲ್ಲಿ ಸ್ವಸಹಾಯ ಸಂಘದ ಸದಸ್ಯರು ಚೀಟಿ ನಡೆಸುವ ಸಂದರ್ಭದಲ್ಲಿ ಮಾವಿನ ಹಣ್ಣು ಹಂಚಿಕೆ ಮಾಡಿಕೊಂಡಿದ್ದಾರೆ. ಮಾವು ಪಡೆದ ಕುಟುಂಬ ಸದಸ್ಯರಿಗೆ ಸೋಂಕು ಹರಡಿದೆ. ಈಗ ಆ ಕುಟುಂಬದವರನ್ನು ಕ್ವಾರಂಟೈನ್​ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಮಾವಿನಹಣ್ಣಿನಿಂದಲೇ ಸೋಂಕು ಹರಡಿರುವುದು ನಿಜವಾದಲ್ಲಿ ಮಾವಿನಹಣ್ಣು ಮಾರಾಟ ಮಾಡಿದ ವ್ಯಕ್ತಿಗೆ ಸೋಂಕಿತ್ತೆ? ಆತ ಬೇರೆ ಎಲ್ಲೆಲ್ಲಿ ಮಾರಾಟ ಮಾಡಿದ್ದ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

    ಇದನ್ನೂ ಓದಿರಿ VIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!

    ಯಾರೀ ಪಿ.869 ?: ಮುಂಬೈನಿಂದ ಮಾರ್ಚ್​ 24ರಂದು ಕೆ.ಆರ್​.ಪೇಟೆಗೆ ಬಂದ ಮರುವನಹಳ್ಳಿಯ ವ್ಯಕ್ತಿ ಮೈಸೂರಿನ ವಿಜಯನಗರಕ್ಕೆ ತೆರಳಿ ಹೋಂ ಕ್ವಾರಂಟೈನ್​ನಲ್ಲಿದ್ದರು. ಮೇ 1ರಂದು ಅನಾರೋಗ್ಯದ ನಿಮಿತ್ತ ಕೆ.ಆರ್​.ಆಸ್ಪತ್ರೆಗೆ ಹೋಗಿದ್ದ ಅವರು ಮೇ 5ರಂದು ಮತ್ತೆ ಆಸ್ಪತ್ರೆಗೆ ತೆರಳಿದ್ದರು. ಆಗ ಅವರನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಅಲ್ಲಿಂದ ಮೇ 11ರಂದು ಕೆ.ಆರ್​.ಪೇಟೆಗೆ ಬಂದಾಗ ಅಲ್ಲಿಯೂ ಪರೀಕ್ಷೆ ಮಾಡಿದಾಗ ಅವರಿಗೆ ಪಾಸಿಟಿವ್​ ಬಂದಿತ್ತು. ನಂತರ ಅವರ ಪ್ರಥಮ ಸಂಪರ್ಕದಲ್ಲಿದ್ದ ಪತ್ನಿ ಸೇರಿ 13 ಜನರಿಗೆ ಸೋಂಕು ಹರಡಿದೆ. ಸದ್ಯ ಪಿ.869 ಗುಣಮುಖರಾಗಿದ್ದು, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿರಿ ಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts