More

    ಕೆಬಿಜೆಎನ್‌ಎಲ್ ಕಚೇರಿ ಸ್ಥಳಾಂತರಗೊಳ್ಳಲಿ

    ವಿಜಯಪುರ : ಕೆಬಿಜೆಎನ್‌ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸುವಂತೆ ಸರ್ಕಾರ ಎರಡೆರಡು ಬಾರಿ ಆದೇಶ ಹೊರಡಿಸಿದರೂ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಆಲಮಟ್ಟಿ ಜಲಾಶಯಕ್ಕೆ ಭೂಮಿ ನೀಡಿ ಸೂರು ಕಳೆದುಕೊಂಡಿರುವ ರೈತರ ಕಷ್ಟ ಕೇಳುವವರು ಯಾರು ? ಸರ್ಕಾರ ಜೀವಂತ ಇದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಜವಳಿ ಆಕ್ರೋಶ ವ್ಯಕ್ತಪಡಿಸಿದರು.


    ಕೆಬಿಜೆಎನ್‌ಎಲ್ ಅಧಿಕಾರಿಗಳು ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸಲು ಸಾಧ್ಯವೇ ಇಲ್ಲ. ಆಲಮಟ್ಟಿಯಲ್ಲಿ ಕೆಬಿಜೆಎನ್‌ಎಲ್ ಕಚೇರಿಗಾಗಿ ಕಟ್ಟಡ ಕಟ್ಟಲಾಗಿದೆ. ಅಧಿಕಾರಿಗಳು ಮಾತ್ರ ಇಲ್ಲ. ಇಲ್ಲಿನ ರೈತರು ಅನುಭವಿಸುತ್ತಿರುವ ಸಮಸ್ಯೆ ಆಲಿಸಲು ಅಧಿಕಾರಿಗಳೇ ಇಲ್ಲ. ಕಚೇರಿ ಸ್ಥಳಾಂತರಿಸಲು ಸರ್ಕಾರದಿಂದ ಎರಡು ಬಾರಿ ಆದೇಶವಾಗಿದ್ದರೂ ಸಹಿತ ಅಧಿಕಾರಿಗಳು ಮಾತ್ರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹಾಗಾದರೇ ಸರ್ಕಾರಕ್ಕಿಂತ ಅಧಿಕಾರಿಗಳೇ ದೊಡ್ಡವರಾ ? ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


    ಉತ್ತರ ಕರ್ನಾಟಕಕ್ಕೆ ಸರ್ಕಾರದ 9 ಇಲಾಖೆಗಳ ಕಚೇರಿಗಳು ಸ್ಥಳಾಂತರವಾಗಬೇಕು. ಆಗ ಮಾತ್ರ ಈ ಭಾಗದ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಈ ವಿಷಯದ ಕುರಿತು ತಲೆಕೆಡಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಮಾತ್ರ ನಿರ್ಲಕ್ಷೃವಹಿಸುತ್ತಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರು ಜನರ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ನಾ ಮುಖ್ಯ ಮಂತ್ರಿ, ನಾ ಮುಖ್ಯ ಮಂತ್ರಿ ಎಂದು ತಮ್ಮಲ್ಲಿಯೇ ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಆಲಮಟ್ಟಿ ಎಂಡಿ ಕಚೇರಿಯಲ್ಲಿ ಜು.26 ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಜಿಲ್ಲೆಯ ಬಹುತೇಕ ಎಲ್ಲ ಪಕ್ಷದ ಶಾಸಕರು, ಸರ್ಕಾರದ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರೂ ತಮ್ಮ ಸ್ವಹಿತಾಸಕ್ತಿಗೆ ಅನುಕೂಲ ವಿಷಯಗಳ ಕುರಿತು ಮಾತ್ರ ಮಾತನಾಡುತ್ತಾರೆ. ಯಾವ ರೈತರ ಹೊಲದಲ್ಲಿ ಎಷ್ಟು ನೀರು ಬಂತು, ಎಷ್ಟು ಬೆಳೆ ಹಾನಿಯಾಯಿತು, ಎಷ್ಟು ಹಣ ಹೊಡೆಯಬೇಕು ಎಂಬುದರ ಕುರಿತು ಸಭೆ ನಡೆಸುತ್ತಾರೆ ಹೊರತು ರೈತರ ಕಷ್ಟ-ನಷ್ಟಗಳ ಕುರಿತು ಚರ್ಚೆ ಮಾಡುವುದಿಲ್ಲ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts