More

    ಜೆಸ್ಕಾಂ ಶಾಖೆಗೆ ರೈತರಿಂದ ಮುತ್ತಿಗೆ- ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಕವಿತಾಳ: ಕೃಷಿ ಚಟುವಟಿಕೆಗೆ ಸಮರ್ಪಕವಾಗಿ ವಿದ್ಯುತ್ ಪೂರಸುವಂತೆ ಒತ್ತಾಯಿಸಿ, ಗ್ರಾಮದಲ್ಲಿರುವ ಜೆಸ್ಕಾಂ ಶಾಖೆಗೆ ರೈತರು ಬುಧವಾರ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬೆಳೆಗಳು ಫಸಲಿಗೆ ಬಂದಿವೆ. ಸಮಯಕ್ಕೆ ಸರಿಯಾಗಿ ನೀರು ಹರಿಸದಿದ್ದರೆ, ಬೆಳೆಗಳು ನಾಶವಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ರೈತರು, ಪರಿಹಾರ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.

    ಸ್ಥಳಕ್ಕೆ ಆಗಮಿಸಿದ ಜೆಇ ಶಿವಪ್ಪ, ಸಮಸ್ಯೆ ಕುರಿತು ರೈತರಿಂದ ಮಾಹಿತಿ ಪಡೆದು ಇಲಾಖೆಯ ಮೇಲಧಿಕಾರಿಗಳಿಗೆ ರವಾನಿಸಿದರು. ಬಳಿಕ ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದ ಬಳಿಕ ರೈತರು ಹೋರಾಟವನ್ನು ಹಿಂಪಡೆದರು.

    ರೈತರಾದ ರಾಜಸಾಬ್, ಗುಂಡಪ್ಪ, ಹನುಮಂತ ಕುಮಾರ, ಯಮನೂರು ಗುಡಿ, ಕುದಮಸಾಬ್, ಲಾಳೆಸಾಬ್, ಅಮರೇಶ ಕರಿಗುಡ್ಡ, ಬಷೀರ್‌ಸಾಬ್, ಮೌನೇಶ ಕುರಬರ, ಅಮರೇಶ, ಹಾಜಿಬಾಬ್, ಪೀರ್ ಮಹ್ಮದ್‌ಸಾಬ್, ಹಸನ್‌ಸಾಬ್, ಜಲಾಲ್‌ಸಾಬ್, ಚಂದಸಾಬ್, ದುರುಗೇಶ ಮ್ಯಾಗಳಮನಿ, ಗಂಗಪ್ಪ, ವೆಂಕೋಬ ನಿಲೋಗಲ್, ಅಜ್ಮಿರ್ ಖುರೇಶಿ, ಅಬ್ದುಲ್ ಮೆಕಾನಿಕ್, ಶಾಲಂಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts