More

    ಕಾವೇರಿಗಾಗಿ ಕರವೇಯಿಂದ ಪ್ರಧಾನಿಗೆ ರಕ್ತದ ಪತ್ರ

    ಮಸ್ಕಿ: ಕಾವೇರಿ ವಿವಾದವನ್ನು ಇತ್ಯರ್ಥಗೊಳಿಸುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಭಾನುವಾರ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕರವೇ

    ಮಸ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆಯ ಮೂಲಕ ಅಂಚೆ ಕಚೇರಿಗೆ ತಲುಪಿ ಕಾವೇರಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ರಕ್ತದಲ್ಲಿ ಪತ್ರ ಬರೆದು ಅಂಚೆ ಮೂಲಕ ಕಳಿಸಿದರು.

    ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ದುರ್ಗರಾಜ ವಟಗಲ್ ಮಾತನಾಡಿ, ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದ್ದು ಇದರಿಂದ ಕರ್ನಾಟಕದ ರೈತರಿಗೆ ವ್ಯವಸಾಯ ಮಾಡಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಜನರಿಗೂ ಕೂಡ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುತ್ತಿದೆ.

    ಆದರೆ ಕೇಂದ್ರ ಸರ್ಕಾರ ಕರ್ನಾಟಕ ವಿಷಯದಲ್ಲಿ ಮಲತಾಯಿ ಧೋರಣೆ ತೋರಿದೆ. ಕೂಡಲೇ ಕಾವೇರಿ ನೀರಿನ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಕರ್ನಾಟಕ ಜನರ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

    ಕರವೇ ಪದಾಧಿಕಾರಿಗಳಾದ ನೂರ್ ಮಹಮ್ಮದ್, ಬಸವರಾಜ್ ಕೊಠಾರಿ, ನಿಸಾರ್ ಅಹ್ಮದ್, ಸುರೇಶ್ ಕಾಟ್ಗಲ್ ವಸಂತ್ ಕುಮಾರ್ ವೆಂಕಟಾಪುರ್, ಸದ್ದಾಮ್ ಗಾಂಧಿನಗರ, ಚಂದಪ್ಪ, ಸುರೇಶ್ ಕೆರೊಡಗಿ, ಅಂಬರೀಶ, ಮಂಜಪ್ಪ ರಮೇಶ್, ರಮೇಶ್ ಕೆಂಭಾವಿ, ಶಶಿಕುಮಾರ್, ಸಾಗರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts