ಆತಂಕ ಸೃಷ್ಟಿಸಿದ ಕವಡಿಕೆರೆ ಏರಿ ಬಿರುಕು

Kavadikere Lake Wall crack
Published on

ಯಲ್ಲಾಪುರ: ಪುರಾಣ ಪ್ರಸಿದ್ಧ, ವಿಶಾಲವಾದ ಕವಡಿಕೆರೆಯ ಏರಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದ್ದ ಸ್ಥಳದಲ್ಲಿ ಬಿರುಕು ಮೂಡಿದ್ದು, ಆತಂಕ ಸೃಷ್ಟಿಸಿದೆ.

ಕಳೆದ ವರ್ಷ ಜೋರಾದ ಮಳೆಯ ಪರಿಣಾಮ ಕೆರೆಯ ಏರಿ ಕುಸಿಯಲಾರಂಭಿಸಿತ್ತು. ನಂತರ ಗ್ರಾಮ ಪಂಚಾಯಿತಿಯ ನೆರವಿನೊಂದಿಗೆ ಸ್ಥಳೀಯರು ಏರಿಯ ಮೇಲೆ ಮಣ್ಣು ಹಾಕಿ ದುರಸ್ತಿಗೊಳಿಸಿದ್ದರು.

ಇದಾದ ನಂತರ ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಆಗಿಲ್ಲ. ಇದೀಗ ಮಳೆ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದ್ದ ಏರಿಯ ಮೇಲೆ ಬಿರುಕು ಮೂಡತೊಡಗಿದೆ.

ಮಳೆ ಇನ್ನಷ್ಟು ಜೋರಾಗಿ ಏರಿ ಒಡೆದರೆ ಸಮೀಪದ ಗದ್ದೆ, ತೋಟಗಳು ಜಲಾವೃತವಾಗುವ ಅಪಾಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net