More

    ಹಿನ್ನೆಲೆ ಡಾನ್ಸರ್​ಗಳ ಖಾತೆಗೆ ಹಣ ವರ್ಗಾವಣೆ ಮಾಡಿದ ಕತ್ರಿನಾ ಕೈಫ್

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್​ ಕೆಲಸ ಈಗಷ್ಟೇ ಶುರುವಾದರೂ, ಮೊದಲಿನಂತೆ ಬಿರುಸಾಗಿಲ್ಲ. ಅದರಲ್ಲೂ ಸಿನಿಮಾವನ್ನೇ ನಂಬಿ ಜೀವನ ನಡೆಸುತ್ತಿದ್ದವರ ಬದುಕು ಅತಂತ್ರವಾಗಿದೆ. ಸ್ಟಾರ್ ನಟರು ಕೈಲಾದಷ್ಟು ಸಹಾಯ ಮಾಡಿದ್ದಾರೆ. ಈಗಲೂ ಆ ಕಾರ್ಯ ಮುಂದುವರಿದಿದೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್​ ಸಹ ಸೇವೆಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ರಜನಿಸಂಗೆ 45 ವರ್ಷ … ಸಂಭ್ರಮಾಚರಣೆ ಶುರು …

    ಹೌದು, 100ಕ್ಕೂ ಅಧಿಕ ಹಿನ್ನೆಲೆ ನೃತ್ಯಗಾರರಿಗೆ ಕತ್ರಿನಾ ಧನಸಹಾಯ ಮಾಡಿದ್ದಾರೆ. ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕತ್ರಿನಾ ಅವರ ಈ ಕೆಲಸಕ್ಕೆ ಡಾನ್ಸರ್ಸ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

    ಹಾಗೆ ವರ್ಗಾವಣೆ ಮಾಡಿದ ಹಣದಿಂದ ಈಗಾಗಲೇ ಹಲವು ನೃತ್ಯಗಾರರು ಸಣ್ಣ ಉದ್ಯಮಗಳನ್ನು ಶುರು ಮಾಡಿದ್ದು, ತರಕಾರಿ ಮಾರಾಟ ಸೇರಿ ರಸ್ತೆ ಬದಿಯಲ್ಲಿ ಹೋಟೇಲ್​ ಉದ್ಯಮ ನಡೆಸುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಎಪಿಎಂಸಿಯಿಂದ ತರಕಾರಿ ಖರೀದಿಸಿ ಮನೆ ಮನೆಗೆ ತಳ್ಳುವ ಗಾಡಿಯ ಮೂಲಕ ತರಕಾರಿ ಮಾರಾಟ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಈ ವಿಚಾರದಲ್ಲಿ ಅಕ್ಷಯ್​ ಕುಮಾರ್ ಅವರನ್ನೇ ಫಾಲೋ ಮಾಡ್ತಿದ್ದಾರೆ ಆಮೀರ್​ ಖಾನ್​!

    ಈ ಹಿಂದೆ ನಟ ವರುಣ್​ ಧವನ್​ ಸಹ ಡಾನ್ಸರ್​ಗಳ ಸಹಾಯಕ್ಕೆ ಧಾವಿಸಿದ್ದರು. ನೇರವಾಗಿ ಅವರ ಖಾತೆಗೆ ಹಣವನ್ನು ಜಮೆ ಮಾಡಿದ್ದರು. ಇನ್ನು ಕೆಲವು ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನೂ ವಿತರಿಸಿದ್ದರು. ಇದೀಗ ಆ ಕೆಲಸವನ್ನು ಕತ್ರಿನಾ ಕೈಫ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್​ನಲ್ಲಿ ವೆಬ್​ಸಿರೀಸ್​ ಆಗಲಿದೆ ವಿಕಾಸ್​ ದುಬೆ ಎನ್​ಕೌಂಟರ್​ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts