More

    ಗೆದ್ದ ಹಣದಿಂದ ಶೂ ಕೊಳ್ಳುವೆ ಎಂದಳು ಕಣ್ಣೀರು ಸುರಿಸಿದ ಕೇಟೀ..

    ಇಂಡಿಯಾನಾಪೊಲಿಸ್: ಲಾಕ್​ಡೌನ್ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಕುತ್ತು ತಂದಿದೆ. ರೆಸ್ಟೋರೆಂಟ್ ಮತ್ತು ಆತಿಥ್ಯ ಉದ್ಯಮಗಳೂ ಕೂಡ ಸಾಕಷ್ಟು ಪೆಟ್ಟು ತಿನ್ನುತ್ತಿವೆ. ಉಪಾಹಾರ ಗೃಹಗಳ ಮಾಲೀಕರು ತಮ್ಮ ವ್ಯವಹಾರಗಳನ್ನು ತಿಂಗಳುಗಟ್ಟಲೆ ಸ್ಥಗಿತಗೊಳಿಸಬೇಕಾದ ದುಸ್ಥಿತಿ ಒದಗಿಬಂದಿದ್ದರಿಂದ ದಿನನಿತ್ಯದ ಉದ್ಯೋಗದಲ್ಲಿರುವ ಹತ್ತಾರು ಮಾಣಿಗಳು, ಬಾಣಸಿಗರು ಮತ್ತು ಇತರರು ನಿರುದ್ಯೋಗಿಗಳಾಗಿದ್ದಾರೆ.
    ಅದೃಷ್ಟವಶಾರ್, ಕರೊನಾ ಮಧ್ಯೆಯೇ ಲಾಕ್‌ಡೌನ್ ಈಗ ನಿಧಾನವಾಗಿ ತೆರವುಗೊಳ್ಳುತ್ತಿರುವುದರಿಂದ ಈಗ ಮತ್ತೆ ಇವರೆಲ್ಲ ಕೆಲಸಕ್ಕೆ ಮರಳುತ್ತಿದ್ದಾರೆ ಮತ್ತು ಹೊಸ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ. ಆದರೂ ಅವರು ಇನ್ನೂ ಜೀವನದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.

    ಇದನ್ನೂ ಓದಿ: ಫೋನ್‌ ಇಲ್ಲದ ಜೀವನ ನನಗೆ ಬೇಡಮ್ಮಾ… ಸಾಯುವುದೇ ಮೇಲು…

    ಅಂತಹ ಸನ್ನಿವೇಶದಲ್ಲಿ ಅತಿಥಿ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪವೇ ಉದಾರತೆ ತೋರಿದರೂ ಅದು ಚಿರಕಾಲ ಸ್ಮರಣೆಯಲ್ಲಿ ಉಳಿಯುತ್ತದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.
    ಪರಿಚಾರಿಕೆಯಾಗಿದ್ದ ಕೇಟಿ ಟೇಲರ್ ಗೆ ತಿಂಗಳುಗಳಿಂದ ಕೆಲಸವಿರಲಿಲ್ಲ. ಇಂಡಿಯಾನಾದ ಪಬ್‌ನಲ್ಲಿ ಪರಿಚಾರಿಕೆಯಾಗಿ ಕೆಲಸಕ್ಕೆ ಮರಳಿದಾಗ, ಗ್ರಾಹಕರೊಬ್ಬರು ಉದಾರ ದೇಣಿಗೆ ನೀಡಿ ಆಕೆಯನ್ನು ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ.

    ಅಮೆರಿಕ ಮತ್ತು ಜಗತ್ತಿನ ಇತರ ಭಾಗಗಳಲ್ಲಿನ ಪರಿಚಾರಿಕೆಯರಿಗೆ ಸಾಮಾನ್ಯವಾಗಿ ಒಟ್ಟು ಬಿಲ್​​​ನ ಶೇ 15-20 ರಷ್ಟು ಟಿಪ್ಸ್ ನೀಡಲಾಗುತ್ತದೆ. ಆದರೆ ಕೇಟೀಗೆ ಒಬ್ಬ ಗ್ರಾಹಕರು ಒಟ್ಟು 35 ಡಾಲರ್​​ ಬಿಲ್​​ ( 2,615 ರೂ) ಗೆ 330 ಡಾಲರ್ (24,659 ರೂ.) ಟಿಪ್ಸ್​​ ನೀಡಿದ್ದಾರೆ, ಇದರಿಂದ ಕೇಟೀಗಾದ ಖುಷಿ ಅಷ್ಟಿಷ್ಟಲ್ಲ.

    ಇದನ್ನೂ ಓದಿ: ಆನ್‌ಲೈನ್‌ಕ್ಲಾಸ್‌ನಿಂದ ದಶಕದ ನಂತರ ಕುಟುಂಬ ಸೇರಿದ ಬಾಲಕನ ರೋಚಕ ಕಥನ…

    ಕೇಟಿಯ ಸ್ನೇಹಿತರು ಅವಳನ್ನು ‘ವೆನ್ಮೋ ಚಾಲೆಂಜ್’ ಗೆ ಹೆಸರಿಸಿದ್ದರು. ಈ ಸವಾಲಿನ ಸ್ವರೂಪವೇನೆಂದರೆ ಜನರಿಂದ ಹಣ ಸಂಗ್ರಹಿಸಿ ನಂತರ ಅದನ್ನು ಉತ್ತಮವೆನ್ನಬಹುದಾದ ಅತಿಥಿ ಉದ್ಯಮದ ಸಿಬ್ಬಂದಿಗೆ ಕೊಡುಗೆಯಾಗಿ ನೀಡಲಾಗುತ್ತದೆ.
    ಈಗ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ನಗದು ನೀಡಿದ ಹೀದರ್ ಹಾಟ್ರಮ್, ಕೇಟೀ ಯೊಂದಿಗೆ ಮಾತನಾಡಿ ಆಕೆ ಹಣವನ್ನು ಹೇಗೆ ಸಂಗ್ರಹಿಸಿದರು ಮತ್ತು ಅದನ್ನು ಕೇಟೀಗೆ ಏಕೆ ನೀಡಿದರು ಎಂಬುದನ್ನು ಹೇಳುತ್ತಿದ್ದಾರೆ.
    ಕೇಟೀ ಅದ್ಭುತ ಸರ್ವರ್! ” ಎಂದು ಹೀದರ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
    ಆನಂದಭಾಷ್ಪ ಸುರಿಸಿದ ಕೇಟೀ, ಹಣವನ್ನು ಒಂದು ಜೊತೆ ಶೂ ಖರೀದಿಸಲು ಖರ್ಚು ಮಾಡುವುದಾಗಿ ತಿಳಿಸಿದರು.
    ಜಗತ್ತಿನಲ್ಲಿ ಎಲ್ಲರೂ ಕಷ್ಟಪಡುತ್ತಿರುವುದರಿಂದ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಹೆಚ್ಚು ತಿಳಿವಳಿಕೆಯುಳ್ಳವರಾಗಲು, ಉದಾರಿಯಾಗಿಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿ. ನೀವು ಇತರರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದರೆ, ಅದನ್ನು ಮಾಡಲು ಹಿಂಜರಿಯಬೇಡಿ ಎಂದು ಕೇಟೀ ಹೇಳಿದ್ದಾಳೆ.

    ನಾನು ಆರ್ಮಿ ಮೇಜರ್, ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದ.. ಆದರೂ ಬಂಧನಕ್ಕೊಳಗಾದ.. ಏನಿದರ ಅಸಲಿಯತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts