More

    ಧರ್ಮದ ಹೆಸರಲ್ಲಿ ಅಧರ್ಮ ತಾಂಡವ

    ಕಟೀಲು: ಸಮಾಜದಲ್ಲಿ ಪ್ರಸಕ್ತ ಧರ್ಮದ ಹೆಸರಿನಲ್ಲಿ ಅಧರ್ಮ ತಾಂಡವವಾಡುತ್ತಿದೆ. ಇದರಿಂದಲೇ ಭಯೋತ್ಪಾದನೆ ಹೆಚ್ಚಾಗುತ್ತಿದೆ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿರುವುದು ದುರಂತ. ಧರ್ಮದ ಮೇಲೆ ನಂಬಿಕೆಯಿದ್ದರೆ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ 9ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ಎಲ್ಲೇ ಹೋದರೂ ನೆಮ್ಮದಿ ಸಿಗುತ್ತಿಲ್ಲ, ಆದರೆ ಭಾರತದಲ್ಲಿ ಇದೆ. ಭಾರತ ಹೊರತುಪಡಿಸಿ ಭಕ್ತಿಯ ಚಳವಳಿ ಎಲ್ಲೂ ನಡೆಯದಿರುವುದು ಇದಕ್ಕೆ ಕಾರಣ ಎಂದರು.

    ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕಟೀಲು ಕ್ಷೇತ್ರ ಎಂದರೆ ನಾಸ್ತಿಕರೂ ಆಸ್ತಿಕರಾಗಿ ಕೈ ಮುಗಿಯುವ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿನ ಯಕ್ಷಗಾನ ಕಲೆಯಲ್ಲಿ ದೊಡ್ಡ ವಿಜ್ಞಾನವೇ ತುಂಬಿದೆ ಎಂದು ಆಶೀರ್ವಚನ ನೀಡಿದರು.
    ಪೇಜಾವರ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ದುರ್ಗುಣಗಳು ದುಶ್ಚಟದ ಪ್ರತೀಕ, ಮತ್ತೊಬ್ಬರನ್ನು ಹಾನಿ ಮಾಡಬೇಕೆಂದು ಯಾರು ಯೋಚಿಸುತ್ತಾರೋ ಅವರೇ ದುಷ್ಟರು. ದುಶ್ಚಟ ದೂರ ಮಾಡಿ ಹೃದಯ ಕಲಶದಲ್ಲಿ ಭಕ್ತಿ ಅಭಿಷೇಕ ಮಾಡಬೇಕಾಗಿದೆ ಎಂದರು.
    ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

    ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನ ಬೋರ್ಡ್ ಸದಸ್ಯ ಡಿ.ಪಿ. ಅನಂತ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೋಲಾರ ಸಂಸದ ಮುನಿಸ್ವಾಮಿ, ಕೊಲ್ಲೂರು ದೇವಳ ಆನುವಂಶಿಕ ಅರ್ಚಕ ಶ್ರೀಧರ ಅಡಿಗ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ತಂತ್ರಿ ವೇದವ್ಯಾಸ ತಂತ್ರಿ, ಆನುವಂಶಿಕ ಅರ್ಚಕ ಮತ್ತು ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕರ್ಣಾಟಕ ಬ್ಯಾಂಕ್ ಎಂಡಿ, ಸಿಇಒ ಮಹಾಬಲೇಶ್ವರ ಎಂ.ಎಸ್, ಕಟೀಲು ಸಂಜೀವಿನಿ ಹಾಸ್ಪಿಟಲ್ ಅಧ್ಯಕ್ಷ ಡಾ. ಕಟೀಲು ಸುರೇಶ್ ರಾವ್, ಉದ್ಯಮಿಗಳಾದ ಸತೀಶ್ ಶೆಟ್ಟಿ ಪಡುಬಿದ್ರಿ, ಮರವೂರು ಕರುಣಾಕರ ಶೆಟ್ಟಿ, ಕಟೀಲು ವಾಮಯ್ಯ ಬಿ. ಶೆಟ್ಟಿ, ಅತ್ತೂರು ಭಂಡಾರಮನೆ ರಾಜೇಶ್ ಶೆಟ್ಟಿ, ಪಿಲಾರ್‌ಖಾನ ಕರುಣಾಕರ ದೇವು ಶೆಟ್ಟಿ, ಉದಯಕುಮಾರ್ ಮಡಂತ್ಯಾರು, ಕಲ್ಲಮುಂಡ್ಕೂರು ಜಯರಾಮ ಶೆಟ್ಟಿ, ಕುಸುಮಾಧರ ಡಿ. ಶೆಟ್ಟಿ, ರಾಜೇಶ್ ಶೆಟ್ಟಿ ಬೆಂಗಳೂರು, ಜೆ.ಸಿ. ಕುಮಾರ್ ಕಟೀಲು, ಬೆಂಗಳೂರು ಶ್ರೀ ಗುರುನರಸಿಂಹ ದೇವಸ್ಥಾನ ಮೊಕ್ತೇಸರ ರಘುನಾಥ ಸೋಮಯಾಜಿ, ಜಾಗತಿಕ ಬಂಟರ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯಕ್ಷಧರ್ಮಬೋಧಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಬಜಪೆ, ಪೆರ್ಮುದೆ ಶ್ರೀಧರ ಪೂಜಾರಿ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ವಾಸುದೇವ ಕಾಮತ್, ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರು ಕಿಶೋರ್ ಶೆಟ್ಟಿ, ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
    ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿ, ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು, ಸಂದೇಶ್ ಕುಮಾರ್ ಶೆಟ್ಟಿ ವಂದಿಸಿದರು.

    ಶಿಲ್ಪಾ ಶೆಟ್ಟಿ ಭೇಟಿ: ಕಟೀಲು ಶ್ರೀದೇವಿಯ ಭಕ್ತೆಯಾಗಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಸಮೇತರಾಗಿ ಗುರುವಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಅವರನ್ನು ಗೌರವಿಸಲಾಯಿತು. ತಾಯಿ ಸುನಂದಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಜತೆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts