More

    ದೇವಸ್ಥಾನಗಳಿಂದ ಧರ್ಮ ಜಾಗೃತಿ

    ಕಟೀಲು: ಕರಾವಳಿ ಕರ್ನಾಟಕದ ದೈವಸ್ಥಾನಗಳು ಧರ್ಮಪ್ರಜ್ಞೆ ಉಳಿಸುವ ಕೆಲಸ ಮಾಡುತ್ತವೆ ಎಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ ಶನಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ದೇವರನ್ನು ಜನರು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಆರಾಧಿಸುತ್ತಾರೆ. ಇದು ಭಾರತದ ವೈಶಿಷ್ಟೃ. ಧಾರ್ಮಿಕ ಆರಾಧನೆ ಎಂಬುದು ತಲತಲಾಂತರದಿಂದ ಬಂದ ಸಂಪ್ರದಾಯ. ಅದನ್ನು ಉಳಿಸಬೇಕು ಎಂದರು.
    ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ದೇವಸ್ಥಾನ ಧಾರ್ಮಿಕ ಶಕ್ತಿ ಕೇಂದ್ರ. ಇಲ್ಲಿಗೆ ಭಕ್ತಿ ಶ್ರದ್ಧೆಯಿಂದ ಬರುವವರಿಗೆ ಆ ಶಕ್ತಿಯ ಅರಿವಾಗುತ್ತದೆ ಎಂದರು. ಚಿಂತಕ ಚಕ್ರವತಿ ಸೂಲಿಬೆಲೆ ಮಾತನಾಡಿ ಭಾರತೀಯರು ಧರ್ಮದ ಹಿನ್ನೆಲೆಯಲ್ಲಿ ಬದುಕಿದವರು, ಅವರ ಬದುಕಿಗೆ ಧರ್ಮದ ಹಿನ್ನೆಲೆ ಇದೆ, ವಿಶ್ವದಲ್ಲಿ ಭಾರಕ್ಕೆ ಸರ್ವಮಾನ್ಯ ಸ್ಥಾನ ದೊರಕುತ್ತಿದೆ ಎಂದರು. ನಂತರ ದಾನಿಗಳನ್ನು ಸನ್ಮಾನಿಸಲಾಯಿತು.

    ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಟೀಲು ದೇವಳದ ತಂತ್ರಿ ಕೃಷ್ಣರಾಜ ತಂತ್ರಿ, ಉಡುಪಿ ವಾಸುಕೀ ಸುಬ್ರಹ್ಮಣ್ಯ ದೇವಳದ ನಾಗಪಾತ್ರಿ ಹಾಗೂ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕ ಕಾರ್ಕಳ ರಾಜೇಶ್ ಭಟ್, ಕಟೀಲು ದೇವಳದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
    ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು. ಡಾ.ಕೃಷ್ಣ ಕಾಂಚನ್ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

    ಧರ್ಮದ ಹಿಂದೆ ಭಗವಂತನಿದ್ದಾನೆ. ನಾವು ನಮ್ಮ ಪರಂಪರೆ, ಸಂಪ್ರದಾಯದ ಶ್ರದ್ಧಾಭಕ್ತಿಗಳ ಬಗ್ಗೆ ಯುವಜನರಿಗೆ ಮನದಟ್ಟು ಮಾಡಿದಾಗ ಧರ್ಮದ ಉತ್ಥಾನವಾಗುತ್ತದೆ.
    – ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಸುಬ್ರಹ್ಮಣ್ಯ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts